ಮಂಗಳವಾರ, ಅಕ್ಟೋಬರ್ 26, 2021
20 °C

ಚಿಕ್ಕಬಳ್ಳಾಪುರ: ಶುಕ್ರವಾರ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ವಿವಿಧ ಫೀಡರ್‌ಗಳಲ್ಲಿ ಕಾಮಗಾರಿ ಕಾರಣ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕಿನ ವಿವಿಧೆಡೆ ಶುಕ್ರವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮೋಟ್ಲೂರು, ಪೋಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1, ಕೆ.ಎನ್.ಆರ್ ಇಂಡಸ್ಟ್ರೀಸ್, ಕಾಕಲಚಿಂತೆ, ಹಿರೇನಾಗವಲ್ಲಿ, ಪಿ. ಚೊಕ್ಕನಹಳ್ಳಿ, ಬೋಡಿನಾರಾಯಣಹಳ್ಳಿ, ಹೊಸಹಳ್ಳಿ, ಗುಂಡ್ಲಮಂಡಿಕಲ್, ದೊಂಬರಗುಡಿಸಲು, ಕಂಗಾನಹಳ್ಳಿ, ಆದೆನ್ನಗಾರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ವ್ಯತ್ಯಯ ಉಂಟಾಗಲಿದೆ.

ಗೌರಿಬಿದನೂರು ತಾಲ್ಲೂಕಿನ ದೊಡ್ಡಮಲ್ಲೆಕೆರೆ, ಚಿಕ್ಕಮಲ್ಲೆಕೆರೆ, ಬೇವಿನಹಳ್ಳಿ, ಇಂದಿರಾನಗರ, ಅಲ್ಲಿಪುರ, ತರಿದಾಳು, ಸೋಮಶೆಟ್ಟಿಹಳ್ಳಿ, ನಾಚಕುಂಟೆ, ಕೊಂಡಾಪುರ, ಸೀಗಲಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ, ವಿಧುರಾಶ್ವಥ್ಥ, ಚಿಕ್ಕಕುರುಗೋಡು, ನಾಗಸಂದ್ರ, ಕದಿರೇನಹಳ್ಳಿ, ಹಾಲಗಾನಹಳ್ಳಿ, ಚಂದನದೂರು, ಕುಡುಮಲಕುಂಟೆ, ದೊಡ್ಡಕುರುಗೋಡು ಗ್ರಾಮಗಳಲ್ಲಿ 12ರಿಂದ 2ರವರೆಗೆ, ಕೊಟಾಲದಿನ್ನೆ, ಹೊಸೂರು, ಸೊನಗಾನಹಳ್ಳಿ, ಭಕ್ತರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ 2ರಿಂದ 4ರವರೆಗೆ, ನಗರಗೆರೆ, ಬಂದಾರ್ಲಹಳ್ಳಿ, ನಾರಸಿಂಹರೆಡ್ಡಿಹಳ್ಳಿಯಲ್ಲಿ 1ರಿಂದ 3ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಾಗೇಪಲ್ಲಿ ತಾಲ್ಲೂಕಿನ ನರಸಾಪುರ, ಪೋಲ ನಾಯಕನಪಲ್ಲಿ, ಬೊಮ್ಮ ಸಂದ್ರ, ಆಚಗಾನಪಲ್ಲಿ, ಕುಂಟಕಿಂದಪಲ್ಲಿ, ಗುಂಡಂವಾರಿಪಲ್ಲಿ, ಬಾನಲಪಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.