ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ತಡೆದು ಪ್ರತಿಭಟನೆ

Last Updated 11 ನವೆಂಬರ್ 2022, 5:21 IST
ಅಕ್ಷರ ಗಾತ್ರ

ಗುಡಿಬಂಡೆ: ಬೀಚಗಾನಹಳ್ಳಿ ಕ್ರಾಸ್ ಬಳಿಯಆದರ್ಶ ಶಾಲೆಗೆ ಹೋಗುವವಿದ್ಯಾರ್ಥಿಗಳಿಗೆ ವರ್ಲಕೊಂಡ ಗ್ರಾಮದ ಬಳಿ ಕೆಎಸ್‌ಅರ್‌ಟಿಸಿ ಬಸ್‌ ನಿಲುಗಡೆ ಮಾಡದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಹೆದ್ದಾರಿ 7 ರಸ್ತೆ ಪಕ್ಕದಲ್ಲಿನ ವರ್ಲಕೊಂಡ ಬಳಿ ರಸ್ತೆ ಸಾರಿಗೆ ವಾಹನಗಳು ನಿಲುಗಡೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಗುರುವಾರ ಬೆಳ್ಳಿಗೆ ಕೆಎಸ್‌ಅರ್‌ಟಿಸಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಹೆದ್ದಾರಿಯಲ್ಲಿ ಅಂತರರಾಜ್ಯಕ್ಕೆ ಹೋಗುವ ಬಸ್‌ ನಿಲುಗಡೆಗೆ ಅವಕಾಶವಿಲ್ಲ. ಬಾಗೇಪಲ್ಲಿಗೆ ಹೋಗುವ ಪ್ರತಿಯೊಂದು ವಾಹನಗಳು ಸರ್ವಿಸ್ ರಸ್ತೆಯಲ್ಲಿ ಒಡಾಡದೇ ಮೇಲು ಸೇತುವೆ ಮೇಲೆ ಹಾದು ಹೋಗುತ್ತಿದೆ. ಹಲವಾರು ಸಲ ತಡೆದು ವಿಚಾರಣೆ ಮಾಡಿದರೂ ಚಾಲಕರು, ನಿರ್ವಾಹಕರು ಹತ್ತಿಸಿ ಕೊಳ್ಳುವುದಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿನಿ ಗಾಯಿತ್ರಿ ತಿಳಿಸಿದರು.

ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕವಿದ್ಯಾಭ್ಯಾಸಕ್ಕೆ ತೊಂದರೆ ಮಾಡುತ್ತಿದ್ದರೂ ಜನಪ್ರತಿನಿಧಿಗಳು, ಸಾರಿಗೆ ಅಧಿಕಾರಿಗಳು ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕ ಅನಂದಪ್ಪ ತಿಳಿಸಿದರು.

2 ಗಂಟೆ ಬಸ್‌ ತಡೆದು ಪ್ರತಿಭಟನೆ ನಡೆಸಿದರು. ಬಾಗೇಪಲ್ಲಿ ಸಾರಿಗೆ ಡಿಪೋ ಅಧಿಕಾರಿ ಮೂರ್ತಿ ಸ್ಥಳಕ್ಕೆಆಗಮಿಸಿ ಬಸ್‌ನ್ನು ವರ್ಲಕೊಂಡ ಬಳಿ ನಿಲುಗಡೆಗೆ ಮಾಡಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT