ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ವಸ್ತು ಪ್ರದರ್ಶನ

Last Updated 4 ಮಾರ್ಚ್ 2021, 15:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಇನಮಿಂಚೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಗಸ್ತ್ಯ ಫೌಂಡೇಷನ್ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.

ವಸ್ತು ಪ್ರದರ್ಶನದಲ್ಲಿ ಕೋವಿಡ್ ಸ್ವಚ್ಛತೆಯ ಸಲಕರಣೆ, ನ್ಯೂಟನ್‌ನ ಜಡತ್ವದ ನಿಯಮ, ಮಾನವನ ಹೃದಯ, ದೇಹ, ಬೆಳಕಿನ ಪ್ರತಿಫಲನ, ಕಾಡು, ಹನಿನೀರಾವರಿ, ರೇಷ್ಮೆ ಸಾಕಾಣೆಯ ಹಂತಗಳು, ಗ್ರಂಥಾಲಯದ ವಿಜ್ಞಾನದ ಪುಸ್ತಕಗಳು, ಸಿರಿಧಾನ್ಯಗಳು, ಸೂಕ್ಷ್ಮದರ್ಶಕ, ಬಹುಪ್ರತಿಫಲನ, ಋತುಮಾನಗಳು, ದ್ಯುತಿಸಂಶ್ಲೇಷಣೆ, ಮೂತ್ರಜನಕಾಂಗ, ಸೌರವ್ಯೂಹ ಇತ್ಯಾದಿ ಮಾದರಿಗಳನ್ನು ಮಕ್ಕಳು ರೂಪಿಸಿ ಪ್ರದರ್ಶಿಸಿದರು. ಅವುಗಳ ಬಗ್ಗೆ ಹಾಜರಿದ್ದವರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್ಡಿಗೊಲ್ಲವಾರಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ವಿನುತಾ, ಸಿ.ವಿ.ರಾಮನ್ ಅವರ ಬೆಳಕಿನ ಚದುರುವಿಕೆ, ಸಂಶೋಧನೆ, ನೋಬ‌ಲ್ ಪ್ರಶಸ್ತಿ ಬಂದ ಬಗೆಯನ್ನು ಮಕ್ಕಳಿಗೆ ತಿಳಿಹಿದರು. ಕಾರಣವಿಲ್ಲದೆ ಯಾವುದೇ ವಿಷಯವನ್ನು ಒಪ್ಪಿಕೊಳ್ಳದಿರಿ ಎಂದರು.

ಶಿಕ್ಷಕ ಚಂದ್ರಕುಮಾರ್ ಮಾತನಾಡಿ, ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸಿದರು. ಸರಳ ಸಂಶೋಧನೆಗಳನ್ನು ಕೈಗೊಂಡು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಗಸ್ತ್ಯ ಫೌಂಡೇಷನ್ ಶಿಕ್ಷಕ ಬಸವೇಶ್ವರ್, ಮಕ್ಕಳಿಗೆ ಸ್ಥಳೀಯ ವಸ್ತುಗಳನ್ನು ಬಳಸಿ ಮಾದರಿಗಳನ್ನು ತಯಾರಿಸುವ ಬಗೆ, ವೈಜ್ಞಾನಿಕ ಮನೋಭಾವ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.

6 ನೇ ತರಗತಿ ವಿದ್ಯಾರ್ಥಿನಿ ಚಂದ್ರಿಕಾ, ಸಿ.ವಿ.ರಾಮನ್ ಅವರ ಜೀವನ ಸಂಶೋಧನೆಯ ಕುರಿತು ಭಾಷಣ ಮಾಡಿದರು. ಶಿಕ್ಷಕಿ ಲಲಿತಾಂಬ, ಅನುಷಾ, ಅಗಸ್ತ್ಯ ಫೌಂಡೇಷನ್‌ನ ಸತೀಶ್, ಶ್ರೀಧರ್, ಮಂಜುನಾಥ್ ವಿಜ್ಞಾನದ ಮಾದರಿಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕಿ ವನಜಾಕ್ಷಿ ಚಂದ್ರಶೇಖರ್ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಭಾರತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT