ಶಿಡ್ಲಘಟ್ಟದ ನಗರಸಭೆ ಅಂಗಡಿ ಮಳಿಗೆಗಳಿಗೆ ನಗರಸಭೆ ಪೌರಾಯುಕ್ತೆ ಜಿ.ಅಮೃತ ಮತ್ತು ಸಿಬ್ಬಂದಿ ಭೇಟಿ ನೀಡಿ ಉಳಿಸಿಕೊಂಡಿದ್ದ ಬಾಡಿಗೆ ವಸೂಲಿ ಮಾಡುತ್ತಿರುವುದು
ನಗರಸಭೆ ಎಲ್ಲ ಸವಲತ್ತುಗಳನ್ನು ನೀಡುತ್ತದೆ. ಪ್ರತಿ ತಿಂಗಳೂ ಬಾಡಿಗೆ ಸಮಯಕ್ಕೆ ಸರಿಯಾಗಿ ಪಾವತಿಸುವುದು ಅಂಗಡಿ ಮಾಲೀಕರ ಜವಾಬ್ದಾರಿ. ತಿಂಗಳುಗಟ್ಟಲೆ ಕೆಲವರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವುದು ಗಮನಕ್ಕೆ ಬಂತು. ಕೆಲವು ಅಂಗಡಿಗಳಿಗೆ ಬೀಗ ಜಡಿದು ಉಳಿದವರಿಗೆ ನೋಟಿಸ್ ನೀಡಿ ಸುಮಾರು ಮೂರೂವರೆ ಲಕ್ಷದಷ್ಟು ಹಣ ವಸೂಲಿ ಮಾಡಿದ್ದೇವೆ. ಉಳಿದವರು ಸಮಯ ಕೇಳಿದ್ದಾರೆ. ಬಾಕಿ ವಸೂಲಿ ಮಾಡಿದ ನಂತರ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಮುಂದೆ ಬಾಡಿಗೆಯ ಟೆಂಡರ್ ಕರೆದಾಗ ಈಗ ಬಾಕಿ ಉಳಿಸಿಕೊಂಡಿರುವವರನ್ನು ಭಾಗವಹಿಸಲು ಬಿಡುವುದಿಲ್ಲ. ನಗರಸಭೆಯ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ.
ಜಿ.ಅಮೃತ ಪೌರಾಯುಕ್ತೆ
ಸರ್ಕಾರಿ ಪ್ರೌಢಶಾಲೆ ಜಾಗದಲ್ಲಿ ಕಟ್ಟಿರುವ ನಗರಸಭೆಯ 50 ಮಳಿಗೆಗಳ ಬಾಡಿಗೆ ಹಣ ಸರಿಯಾಗಿ ನಗರಸಭೆಗೆ ಪಾವತಿಯಾಗುತ್ತಿಲ್ಲ. ಹಲವು ಪ್ರಭಾವಿಗಳು ಸೇರಿಕೊಂಡು ಬೇರೆಯವರಿಗೆ ಹೆಚ್ಚು ಹಣಕ್ಕೆ ಬಾಡಿಗೆ ಕೊಟ್ಟಿರುವರು. ಇವುಗಳನ್ನೆಲ್ಲಾ ಹೊಸದಾಗಿ ಟೆಂಡರ್ ಕರೆದರೆ ನಗರಸಭೆಗೆ ಹೆಚ್ಚು ಆದಾಯ ಬರುತ್ತದೆ. ಅನಧಿಕೃತವಾಗಿ ಸೇರಿಕೊಂಡಿರುವವರನ್ನು ಮೊದಲು ಹೊರ ಹಾಕಬೇಕು.