ಶಿಡ್ಲಘಟ್ಟ: ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಿ ದೇವಾಲಯದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಬುಧವಾರ ಶಾಂತಿ ಸಭೆ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಪಿ. ಮುರಳೀಧರ್, ‘ಮಾರ್ಚ್ 1ರಿಂದ 4ರವರೆಗೆ ನಡೆಯಲಿರುವ ಕರಗ ಮಹೋತ್ಸವವನ್ನು ಶಾಂತಿಯುತವಾಗಿ ಮತ್ತು ಶ್ರದ್ಧಾಭಕ್ತಿ, ಸೌಹಾರ್ದತೆಯಿಂದ ಆಚರಿಸಬೇಕು’ ಎಂದು ಹೇಳಿದರು.

ಕರಗ ಮಹೋತ್ಸವದ ನಾನಾ ಧಾರ್ಮಿಕ ಕಾರ್ಯಗಳು, ಹಸಿ ಕರಗ ಮತ್ತು ಹೂವಿನ ಕರಗ, ಸಾರ್ವಜನಿಕವಾಗಿ ನಡೆಯುವ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಕರಗ ಮಹೋತ್ಸವವು ಭಾವೈಕ್ಯತೆ ಸಂಕೇತ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಧರ್ಮದವರು ಮತ್ತು ಸಮುದಾಯದವರು ಒಂದಾಗಿ ಹಬ್ಬ ಆಚರಿಸಬೇಕು. ಹಬ್ಬದ ಸುಗಮ ನಿರ್ವಹಣೆಗೆ ಸಾರ್ವಜನಿಕರು ಮತ್ತು ಉತ್ಸವ ಸಮಿತಿಯವರು ಪೊಲೀಸರಿಗೆ ಸಹಕರಿಸಬೇಕು ಎಂದರು.

ತಹಶೀಲ್ದಾರ್ ಎನ್.ಗಗನ ಸಿಂಧು ಮಾತನಾಡಿ, ಕರಗ ಮಹೋತ್ಸವವನ್ನು ಶ್ರದ್ಧಾ, ಭಕ್ತಿ, ಭಾವೈಕ್ಯತೆಯಿಂದ ಆಚರಿಸುವಂತೆ ಹೇಳಿದರು.

ಸರ್ಕಲ್ ಇನ್ಸ್ಪೆಕ್ಟರ್ ಜೆ.ಎನ್.ಆನಂದ್ ಕುಮಾರ್ ಮಾತನಾಡಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪೂಜೆ ಪುನಸ್ಕಾರಗಳು ಹಾಗೂ ಕರಗ ಮಹೋತ್ಸವದ ಅಂಗವಾಗಿ ಆಯೋಜಿಸುವ ವಾದ್ಯಗೋಷ್ಠಿ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರು ಬೆಸ್ಕಾಂ, ನಗರಸಭೆ ಮತ್ತು ಪೋಲಿಸ್ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡಿ, ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.

ಈ ವೇಳೆ ನಗರ ಠಾಣೆ ಪಿ.ಎಸ್.ಐ ಎಂ.ವೇಣುಗೋಪಾಲ್, ನಗರಸಭೆ ಪೌರಾಯುಕ್ತೆ ಜಿ.ಅಮೃತಾ, ಬೆಸ್ಕಾಂ ಇಲಾಖೆ ಎ.ಇ ಅನಂತ್ , ಪೂಜಮ್ಮ ದೇವಿ ದೇವಾಲಯ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚಿಕ್ಕಮುನಿಯಪ್ಪ, ಆರ್. ಗಣೇಶ್, ಎಂ.ನರಸಿಂಹ, ಕೆ.ಮಂಜುನಾಥ್, ಎಂ.ಚಿಕ್ಕಮುನಿಯಪ್ಪ, ಯಾ.ಮಾ. ನಾರಾಯಣಸ್ವಾಮಿ, ನಾಗನರಸಿಂಹ, ಕೆ.ನರಸಿಂಹಮೂರ್ತಿ, ಎಸ್.ಎಂ.ರಮೇಶ್, ಎಂ.ನಾಗರಾಜು, ಕೆ.ರವಿಶಂಕರ್, ಕೆ.ನಾರಾಯಣಸ್ವಾಮಿ, ಮುನಿಕೃಷ್ಣ, ಎನ್.ದ್ಯಾವಪ್ಪ, ಎ.ನರಸಿಂಹಮೂರ್ತಿ, ಎಂ.ಗುರುಮೂರ್ತಿ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.