ಭಾನುವಾರ, ಮೇ 22, 2022
29 °C

ಗೌರಿಬಿದನೂರು: ಮದ್ಯದ ಅಮಲಿನಲ್ಲಿ ಚಾಕುವಿನಿಂದ ಇರಿದು ತಂದೆ ಕೊಂದ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಮದ್ಯದ ಅಮಲಿನಲ್ಲಿದ್ದ ಮಗ ಚಾಕುವಿನಿಂದ ಇರಿದು ತನ್ನ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಪುರ ಗ್ರಾ.ಪಂ ವ್ಯಾಪ್ತಿಯ ಚನ್ನಬೈರೇನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಂಜುನಾಥ್ (22) ಆರೋಪಿಯಾಗಿದ್ದು, ಈತನು ತನ್ನ ತಂದೆ ಮುನೇಗೌಡ (48) ರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬೆಳೆದು ನಿಂತ ಮಗ ನಿತ್ಯ ಮದ್ಯ ಸೇವನೆ ಮಾಡಿಕೊಂಡು ಮನೆಯಲ್ಲಿ‌ ಹಾಗೂ ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದ ಪರಿಣಾಮವಾಗಿ ಆತನ ಪೋಷಕರು ದಂಡಿಸಿ ಬುದ್ಧಿವಾದ ಹೇಳುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಮದ್ಯ ಸೇವಿಸಿ ಮನೆಗೆ ಬಂದ ಮಗನಿಗೆ ಪೋಷಕರು ಬುದ್ದಿ ಮಾತನ್ನು ಹೇಳಿದ ಕಾರಣ ತನ್ನ ತಾಯಿಯನ್ನು ಮನೆಯಿಂದ ಹೊರಗೆ ತಳ್ಳಿ ಮನೆಯೊಳಗಿದ್ದ ತಂದೆ ಮುನೇಗೌಡ ರನ್ನು ಮಗ ಮಂಜುನಾಥ್ ‌ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಸಿಪಿಐ ಶಶಿಧರ್ ಹಾಗೂ ಮಂಚೇನಹಳ್ಳಿ ಪಿಎಸೈ ಲಕ್ಷ್ಮಿನಾರಾಯಣ ಸ್ಥಳಕ್ಕೆ ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ತಲೆಮರೆಸಿಕೊಂಡಿರುವ ಆರೋಪಿಯನ್ನು ಹುಡುಕಲು ಯತ್ನಿಸಿದ್ದಾರೆ. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ ಪಿ ರವಿಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು