ಸೋಮವಾರ, ಜನವರಿ 20, 2020
20 °C
ಅಭಯ ಮಹಿಳಾ ವೇದಿಕೆಯಿಂದ ವಿಶಿಷ್ಟ ಕ್ಯಾಲೆಂಡರ್‌

ಶಿಡ್ಲಘಟ್ಟ: ಕ್ಯಾಲೆಂಡರ್‌ನಲ್ಲಿ ಸಾಧಕಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: 2019 ರ ವರ್ಷ ಮುಗಿಯುತ್ತಾ ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಕ್ಯಾಲೆಂಡರ್ ಬದಲಿಸುವ ಸಮಯ ಬಂದಿದೆ. ಹೊಸಹೊಸ ಕ್ಯಾಲೆಂಡರುಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ.

ಅವೆಲ್ಲವುಗಳಿಗಿಂತ ವಿಭಿನ್ನವಾದ ಹೆಣ್ಣುಮಕ್ಕಳಿಗೆ ಸ್ಫೂರ್ತಿಯನ್ನು ತುಂಬುವ, ಸೋತವರಿಗೆ ಧೈರ್ಯ ತುಂಬುವ ಸಾಧಕ ಮಹಿಳೆಯರ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಒಂದು ಹೊರಬಂದಿದೆ. ಇದರಲ್ಲಿ ಸಾಧಕ ಮಹಿಳೆಯರ ಜನ್ಮದಿನಕ್ಕೆ ಅನುಗುಣವಾಗಿ ಅವರ ಭಾವಚಿತ್ರ ಮತ್ತು ಮಾಹಿತಿಯನ್ನು ಅಳವಡಿಸಲಾಗಿದೆ. 365 ದಿನಗಳು, 365 ಸಾಧಕಿಯರು, ಇದರ ವಿಶೇಷ.

ಬದುಕು ಟ್ರಸ್ಟ್‌ನ ಅಡಿಯಲ್ಲಿ ಅಭಯ ಮಹಿಳಾ ವೇದಿಕೆಯು ಹೊರತಂದಿರುವ ಈ ವಿಶಿಷ್ಟ ಕ್ಯಾಲೆಂಡರನ್ನು ಸಿದ್ಧಪಡಿಸುವಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಕೆಲವು ಹೆಣ್ಣುಮಕ್ಕಳು ಕೈಜೋಡಿಸಿದ್ದಾರೆ. ಅಭಯ ಮಹಿಳಾ ವೇದಿಕೆಯಡಿ ಈ ಹೆಣ್ಣುಮಕ್ಕಳು ಹಲವಾರು ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ವೈದ್ಯಕೀಯ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇವುಗಳ ಜತೆಗೆ ಪ್ರತಿವರ್ಷ ಕ್ಯಾಲೆಂಡರ್ ತಯಾರಿಯೂ ಇವರ ಮುಖ್ಯ ಕಾರ್ಯವಾಗಿದೆ.

ಕ್ಯಾಲೆಂಡರ್ ಹಂತಗಳಲ್ಲಿ ಅಶ್ವಿನಿ, ನಿಲೀನ, ಹಾರಿಕಾ, ಚೈತ್ರ, ವಿಜಯಲಕ್ಷ್ಮೀ, ಚನ್ನಕೇಶವ, ಉಷಾ, ಬಸವರಾಜ್, ಸ್ಮೃತಿ, ವೆಂಕಟೇಶ ಹಾಗೂ ಇತರ ಸದಸ್ಯರೂ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದಾರೆ.

ಈ ಕ್ಯಾಲೆಂಡರ್ ಬೇಕಿದ್ದರೆ, ಸಂಪರ್ಕ: 8310787876

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು