ಶಾಶ್ವತ ನೀರಾವರಿಗಾಗಿ ಕೃಷ್ಣ ನದಿ ನೀರನ್ನು ಬಯಲು ಸೀಮೆಗೆ ಹರಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಈ ಯೋಜನೆ ಅನುಷ್ಠಾನಗೊಳಿಸಬೇಕು.
ಚನ್ನರಾಯಪ್ಪ, ಪ್ರಾಂತ ರೈತ ಸಂಘದ ಮುಖಂಡ ಬಾಗೇಪಲ್ಲಿ
ಕೂಲಿಕಾರ್ಮಿಕರು ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಲ್ಪಿಸಲು ಗಾರ್ಮೆಂಟ್ಸ್ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಸರ್ಕಾರ ಹೆಚ್ಚಿನ ಅನುದಾನ ಕಲ್ಪಿಸಬೇಕು.
ಉಮಾಶ್ರೀ, ಪ್ರಾಂಶುಪಾಲರು ಬ್ಲೂಮ್ಸ್ ಕಾಲೇಜು
ಬಾಗೇಪಲ್ಲಿಯನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದೇರ್ಜೆಗೇರಿಸಬೇಕು. ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕು.
ಕೆ.ಎನ್.ಹರೀಶ್, ರಕ್ಷಣಾ ವೇದಿಕೆ ಅಧ್ಯಕ್ಷ
ಪ್ರವಾಸಿ ತಾಣಗಳಾದ ಗುಮ್ಮನಾಯಕನಪಾಳ್ಯದ ಕೋಟೆ ಗಡಿದಂ ದೇವಾಲಯ ಯಾತ್ರಿ ನಿವಾಸ ಹುಸೇನುದಾಸಯ್ಯ ದರ್ಗಾ ಆದಿನಾರಾಯಣ ಮಠ ಗೂಳೂರಿನ ನಿಡುಮಾಮಿಡಿ ಮಠ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಬೇಕು.
ಜಿ.ಎಂ.ರಾಮಕೃಷ್ಣಪ್ಪ, ಹೋರಾಟಗಾರ
ಪ್ರವಾಸಿಗರು ಮತ್ತು ಭಕ್ತರ ಉಪಯೋಗಕ್ಕೆ ಬಳಕೆಯಾಗಬೇಕಿದ್ದ ಯಾತ್ರಿ ನಿವಾಸ ಅನುದಾನದ ಕೊರತೆಯಿಂದ ಪಾಳು ಬಿದ್ದ ಸ್ಥಿತಿಗೆ ತಲುಪಿರುವುದು