ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಪುರ ಗ್ರಾಮದಲ್ಲಿ ಗ್ಯಾಸ್ ಸ್ಟೌ ಜಖಂಗೊಂಡ ಮನೆಗೆ ಬುಧವಾರ ಭೇಟಿ ನೀಡಿದ್ದ ಡಾ.ಕೆ.ಸುಧಾಕರ್ ಫೌಂಡೇಶನ್ ಸಿಬ್ಬಂದಿ ಮತ್ತು ಪೊಲೀಸರು ಮಾಹಿತಿ ಸಂಗ್ರಹಿಸಿದರು.

‘ಕುಕ್ಕರ್ ಸ್ಫೋಟದಿಂದ ಸ್ಟೌ ನಾಶವಾಗಿದೆಯೇ ಹೊರತು ಅದು ಸ್ಫೋಟಿಸಿಲ್ಲ’ ಎಂದು ಸ್ಟೌ ಕಂಪನಿ ಸಿಬ್ಬಂದಿ ಸ್ಪಷ್ಟಪಡಿಸಿದರು.

‘ಚುನಾವಣೆ ಘೋಷಣೆಗೂ ಮುನ್ನ ಸಂಕ್ರಾಂತಿ ಸಮಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಸ್ಟೌ ನೀಡಲಾಗಿತ್ತು.

‘ಪುರ ಗ್ರಾಮದ ಮಂಜುಳಾ ಅವರ ಮನೆಯ ಕುಕ್ಕರ್ನ ಸೇಫ್ಟಿ ವಾಲ್ ಮುಚ್ಚಿದ್ದರಿಂದ ಅದು ಸ್ಫೋಟವಾಗಿದೆ. ಕುಟುಂಬಕ್ಕೆ ಮತ್ತೊಂದು ಹೊಸ ಒಲೆ ನೀಡಿದ್ದೇವೆ’ ಎಂದು ಫೌಂಡೇಶನ್ ಸಿಬ್ಬಂದಿ ತಿಳಿಸಿದರು.

‘ಅಡುಗೆ ಮಾಡಲು ಕುಕ್ಕರ್ ಇಟ್ಟು ಮನೆಯ ಹೊರಗಿದ್ದೆವು. ಸ್ಫೋಟದ ಸದ್ದು ಕೇಳಿ ಒಳಗೆ ಬಂದು ನೋಡಿದಾಗ ಕೆಳಗೆ ಬಿದ್ದಿದ್ದ ಸ್ಟೌ ಸ್ಫೋಟವಾಗಿದೆ ಎಂದು ಭಾವಿಸಿದೆವು’ ಎಂದು ಮಂಜುಳಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.