ಗುರುವಾರ , ಜೂನ್ 24, 2021
29 °C

ಅಪ್ರತಿಮ ದೇಶಭಕ್ತ ಸುಭಾಷ್‌ ಚಂದ್ರ ಬೋಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಭಾರತ ಕಂಡ ಅಪ್ರತಿಮ ದೇಶಭಕ್ತ ಸುಭಾಷ್‌ ಚಂದ್ರ ಬೋಸ್‌ ಅವರ ಜೀವನವನ್ನು ಇಂದಿನ ಯುವಜನರು ಆದರ್ಶವಾಗಿಟ್ಟು ಕೊಳ್ಳಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

‘ದೇಶ ಕಂಡ ಅಪರೂಪದ ಸೇನಾನಿ ಸುಭಾಷ್ ಚಂದ್ರ ಅವರು ತಮ್ಮ ಶಿಸ್ತುಬದ್ದ ಜೀವನದಿಂದ ಯುವಕರಿಗೆ ಮಾದರಿಯಾಗಿದ್ದರು. ಭಾರತದ ವಿಮೋಚನೆಗೆ ಶ್ರಮಿಸಿದವರು. ಕೇವಲ ಹೋರಾಟದಿಂದ ಮಾತ್ರ ದೇಶಕ್ಕೆ ಸ್ವತಂತ್ರ ಸಿಗುವುದು ಎಂದು ನಂಬಿದ್ದ ಅವರು ಅದಕ್ಕಾಗಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು’ ಎಂದು ತಿಳಿಸಿದರು. 

‘ವಿದೇಶ ಪರ್ಯಟನೆ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಲು ಸ್ವಂತ ಸೇನೆಯನ್ನು ಕಟ್ಟಿದ ಮಹಾನ್ ನಾಯಕ ನೇತಾಜಿ. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಅವರು ಬದುಕಿದ ಕಾಲದಲ್ಲಿ ಜನಮನ್ನಣೆ ಗಳಿಸಿ ಮಹಾತ್ಮರಾಗುತ್ತಾರೆ. ಸ್ವತಂತ್ರಕ್ಕಾಗಿ 6 ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು ಈಗಿನ ಯುವಜನತೆ ನೆನೆಯಬೇಕು’ ಎಂದರು.

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಮುಖಂಡರಾದ ಕೆ.ವಿ.ನವೀನ್ ಕಿರಣ್, ನಂದಿ ಎಂ ಆಂಜಿನಪ್ಪ, ಯಲುವಹಳ್ಳಿ ರಮೇಶ್, ಎಸ್.ಪಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ,  ಪ್ರಧಾನ ಕಾರ್ಯದರ್ಶಿ ಸುರೇಶ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ, ಎನ್ಎಸ್‌ಯುಐ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.