ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಗಳೆ ಬಿಡುವ ಕೆಲಸ ಮಾಡಲಿಲ್ಲ: ಸಿ.ಟಿ.ರವಿ

ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಾಗ್ದಾಳಿ
Last Updated 3 ಡಿಸೆಂಬರ್ 2019, 13:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರಕ್ಕೆ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಘೋಷಿಸಿದ್ದು ನಾನು ಎಂದು ಹೇಳುವ ಸಿದ್ದರಾಮಯ್ಯ ಅದಕ್ಕೆ ಬಿಡಿಗಾಸಾದರೂಮಂಜೂರು ಮಾಡಿದ್ದರೆ?’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ನಡೆದ ರೋಡ್‌ ಶೋದಲ್ಲಿ ಮಾತನಾಡಿದ ಅವರು,ಯಡಿಯೂರಪ್ಪ ವೈದ್ಯಕೀಯ ಕಾಲೇಜಿಗೆ ₹650 ಕೋಟಿ ಕೊಟ್ಟು, ಶಂಕುಸ್ಥಾಪನೆ ನೆರವೇರಿಸಿದರು. ನಾವು ಬೊಗಳೆ ದಾಸನಂತೆ ಬೊಗಳೆ ಬಿಡುವ ಕೆಲಸ ಮಾಡಲಿಲ್ಲ. ಬದಲು ಯೋಜನೆಗಳ ಅನುಷ್ಠಾನಕ್ಕೆ ಏನೆಲ್ಲ ಆಗಬೇಕೋ ಆ ಕೆಲಸ ಮಾಡಿದ್ದೇವೆ. ಇದು ನಮ್ಮ ಬದ್ಧತೆ’ ಎಂದರು.

‘ರಾಜ್ಯದಲ್ಲಿ ಇವತ್ತು ಕಾಂಗ್ರೆಸ್‌, ಜೆಡಿಎಸ್‌ನವರು ಹಗಲುಗನಸು, ತಿರುಕನ ಕನಸು ಕಾಣಲು ಶುರು ಮಾಡಿದ್ದಾರೆ. ತಿರುಕನ ಕನಸು ನನಸಾಗುವುದಿಲ್ಲ’ ಎಂದು ತಿಳಿಸಿದರು.

‘ಮನೆ ಅಳಿಯನಿಗೆ ಈಗ ಚಿಕ್ಕಬಳ್ಳಾಪುರ ನೆನಪಾಗಿದೆ. ಕುಮಾರಸ್ವಾಮಿ ಅವರು ರಾಮನಗರ, ಚಿಕ್ಕಬಳ್ಳಾಪುರ ಎರಡೂ ನನಗೆ ಕಣ್ಣು ಇದ್ದಂತೆ ಎಂದು ಹೇಳುತ್ತಾರೆ. ಅದು ನಿಜವೇ ಆಗಿದ್ದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಇಡುವ ಕೆಲಸ ಮಾಡುತ್ತಿರಲಿಲ್ಲ. ಇಲ್ಲಿನ ವೈದ್ಯಕಿನ ಕಾಲೇಜು ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದು ಯಾರ ಕಾಲದಲ್ಲಿ? ಕುಮಾರಸ್ವಾಮಿ ಅವರ ಆಡಳಿತದಲ್ಲಿ ಡಿ.ಕೆ.ಶಿವಕುಮಾರ್ ಕನಕಪುರಕ್ಕೆ ಎತ್ತಿಕೊಂಡು ಹೋದರು. ಆಗ ಮನೆ ಅಳಿಯ ಮಾತೇ ಆಡಲಿಲ್ಲ’ ಎಂದು ಟೀಕಿಸಿದರು.

‘ಜನಪ್ರತಿನಿಧಿಯಾದವರು ಮೊದಲು ತನ್ನ ಜನರಿಗೆ ಬದ್ಧರಾಗಿರಬೇಕು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ನಮಗೆ ಜನರೇ ನಾಯಕರು. ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರು ನಮ್ಮ ಮಾಲೀಕರಲ್ಲ. ಚಿಕ್ಕಬಳ್ಳಾಪುರದ ಜನ ನಮಗೆ ಮಾಲೀಕರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT