ಚಿಂತಾಮಣಿ: ‘ಅನಾಥರಿಗೆ ಅನ್ನದಾನವ ಮಾಡಿ ಅನಾಥ ಪ್ರಜ್ಞೆಯನ್ನು ದೂರ ಮಾಡೋಣ. ಹಸಿವಿದ್ದವರಿಗೆ ಅನ್ನವ ಕೊಟ್ಟು ಸಂತೃಪ್ತಿ ಪಡಿಸೋಣ’ ಎಂದು ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರಾಘವೇಂದ್ರ ಈ. ಹೊರಬೈಲು ಅಭಿಪ್ರಾಯಪಟ್ಟರು.
ನಗರದ ವಾಸವಿ ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಚಾರಿಟಬಲ್ ಟ್ರಸ್ಟ್‌ನಿಂದ ಅನಾಥಾಶ್ರಮದಲ್ಲಿ ಗುರುವಾರ ಅನ್ನ ಸಂತರ್ಪಣೆ ಮಾಡಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಬಹುತೇಕ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ದಾನಿಗಳ ಸೇವೆ ಸ್ಥಗಿತಗೊಂಡಿದೆ. ಸೇವೆ ಮಾಡುವ ಮನಸ್ಸಿದ್ದವರಿಗೂ ಕೋವಿಡ್ ನಿಯಮಗಳು ಅಡ್ಡಿಯಾಗಿವೆ. ಪ್ರಸ್ತುತ ನಿಯಮಗಳ ಸಡಿಲಿಕೆಯಿಂದಾಗಿ ಮತ್ತೆ ಸೇವಾಕರ್ತರಿಗೆ ಅವಕಾಶ ಲಭಿಸಿರುವುದು ಸಂತೋಷದ ವಿಚಾರ. ದಾನಿಗಳು ಅವಕಾಶವನ್ನು ಬಳಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಅಗತ್ಯವಿದ್ದವರಿಗೆ ನೆರವಾಗಬೇಕು ಎಂದರು.
ಕವಿ ಮೂಡಲಗೊಲ್ಲಹಳ್ಳಿ ಕೆ. ನರಸಿಂಹಪ್ಪ ಮಾತನಾಡಿ, ವ್ಯಕ್ತಿ ತನ್ನ ಜೀವನದಲ್ಲಿ ಲಭಿಸಿದ ಅವಕಾಶವನ್ನು ಸಮಾಜಕ್ಕಾಗಿ ಸದ್ವಿನಿಯೋಗ ಮಾಡುವುದನ್ನು ಸಮಾಜ ಸೇವೆ ಎನ್ನುತ್ತೇವೆ ಎಂದು ಹೇಳಿದರು.
ಐಶ್ವರ್ಯವಿದ್ದರೂ ಮನಸ್ಸಿಲ್ಲದವರು ಯಾವುದಾದರೊಂದು ನೆಪವೊಡ್ಡಿ ಸಮಾಜ ಸೇವೆಯಿಂದ ದೂರವಿರುತ್ತಾರೆ. ಮನಸ್ಸಿದ್ದವರು ಇರುವುದರಲ್ಲೇ ಸೇವೆ ಮಾಡಲು ಯಾವುದಾದರೊಂದು ನೆಪ ಹುಡುಕಿ ಸಮಾಜದ ಸೇವೆಗೆ ಮುಂದಾಗುತ್ತಾರೆ. ಇಂತಹ ಸಾಲಿನಲ್ಲಿ ರಾಘವೇಂದ್ರ ಈ. ಹೊರಬೈಲು ಕುಟುಂಬದವರ ಕಾರ್ಯ ಅಭಿನಂದನಾರ್ಹ ಎಂದುಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಆರ್. ನರಸಿಂಹಪ್ಪ, ಅಧ್ಯಕ್ಷೆ ಜೆ.ಕೆ. ನಿರ್ಮಲಾ, ಆಶ್ರಮದ ತನುಜಾ, ಎನ್. ಮಂಜುಳಾ, ಮಂಜುಭಾರ್ಗವಿ, ಮುದ್ದಮ್ಮ, ಬಾಲಕೃಷ್ಣಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.