ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರು ಪೂರೈಕೆ: ಪ್ರತಿಭಟನೆ

Last Updated 10 ನವೆಂಬರ್ 2021, 6:50 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣಕ್ಕೆ ಎಚ್.ಎನ್ ವ್ಯಾಲಿಯ ಕೊಚ್ಚೆ ನೀರು ಹರಿಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣದ) ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ಮಾಡಿದರು.

ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು, ಮುಖ್ಯರಸ್ತೆಯಲ್ಲಿ ಸಂಚರಿಸಿ ಪಟ್ಟಣಕ್ಕೆ ಕೊಚ್ಚೆ ನೀರು ಹರಿಯುತ್ತಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾ ಮೆರವಣಿಗೆ ಮಾಡಿದರು.

ಕರವೇ (ನಾರಾಯಣಗೌಡ ಬಣ)ದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, ಎಚ್.ಎನ್.ವ್ಯಾಲಿಯ ಕೊಚ್ಚೆ ನೀರು ರಾಮಸಮುದ್ರದ ಮೂಲಕ ಕೆರೆಗಳ ಮೂಲಕ ಚಿತ್ರಾವತಿ ಬ್ಯಾರೇಜಿಗೆ ಹರಿದಿದ್ದು, ಪಟ್ಟಣ ಪ್ರದೇಶಗಳ ವಾರ್ಡ್‍ಗಳಿಗೆ ಇದೇ ನೀರು ಸರಬರಾಜು ಮಾಡಲಾಗಿದೆ. ಕೊಚ್ಚೆಯ ನೀರು ಸಂಪ್‌ಗಳಿಗೆ ಹರಿದಿದೆ. ಕುಡಿಯಲು ಅಲ್ಲದೇ ಗೃಹಬಳಕೆಗೆ ಆಗುತ್ತಿಲ್ಲ. ಕೊಚ್ಚೆ ನೀರು ಮನೆಗಳಿಗೆ ಹರಿದಿದ್ದರೂ, ಪುರಸಭೆ ಅಧಿಕಾರಿಗಳು ನೀರನ್ನು ಸಂಸ್ಕರಣೆ ಮಾಡಿಲ್ಲ. ಕೂಡಲೇ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಕೆ.ಎ.ಮಧುಕರ್ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ,‌ ಎಚ್.ಎನ್.ವ್ಯಾಲಿಯ ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರನ್ನು ನಿರಂತರವಾಗಿ ಪ್ರಾಯೋಗಿಕ ಪರೀಕ್ಷೆಯ ವರದಿಗೆ ಕಳುಹಿಸಲಾಗಿದೆ. ಇದುವರೆಗೂ ವರದಿ ಬಂದಿಲ್ಲ. ಜನರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ತಿಳಿಸಿದರು.

ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್‍ಉಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೇಖರಾಚಾರಿ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಾಂತಮ್ಮ, ಪ್ರಧಾನ ಸಂಚಾಲಕ ನಟರಾಜ್, ಖಜಾಂಚಿ ನಾರಾಯಣಸ್ವಾಮಿ, ಸಂಚಾಲಕ ಶಿವಕುಮಾರ್, ಮುಖಂಡರಾದ ಮಂಜುನಾಥ್‍ನಾಯಕ, ಆಂಜಿ, ಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ಇಮಾಂಸಾಬ್, ನಾರಾಯಣಸ್ವಾಮಿ, ಗಣೇಶ್, ನಿತೀನ್, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT