ಶಿಡ್ಲಘಟ್ಟ: ತಾಲ್ಲೂಕಿನ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಗಿಮಾಕಲಹಳ್ಳಿ ಪುಟ್ಟ ಗ್ರಾಮಕ್ಕೆ ದಶಕ ಉರುಳಿದರೂ ರಸ್ತೆ ಕಾಣುವ ಸೌಭಾಗ್ಯವಿಲ್ಲ. ರಸ್ತೆ ಇಲ್ಲದ ಪರಿಣಾಮ ಗ್ರಾಮಸ್ಥರು ಈಗಲೂ ಹಲವು ಸೌಕರ್ಯಗಳಿಗಾಗಿ ಪರದಾಡುತ್ತಿದ್ದಾರೆ.

ಈ ಗ್ರಾಮದಲ್ಲಿ ಒಟ್ಟು ಹನ್ನೊಂದು ಮನೆಗಳಿವೆ. ಅವುಗಳಲ್ಲಿ ಏಳು ಗುಡಿಸಲುಗಳಿವೆ. ಇಲ್ಲಿನ ಮಕ್ಕಳು 4 ಕಿ.ಮೀ. ದೂರದ ಹಳೇಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಗೆ ನಡೆದುಕೊಂಡೇ ಹೋಗುವ ಅನಿವಾರ್ಯತೆ ಇದೆ.

`ಈ ಗ್ರಾಮದ ಯಾವುದೇ ಮಗು ಶಾಲೆಯಿಂದ ಹೊರಗುಳಿದಿಲ್ಲ. ಇಲ್ಲಿನ ಮಕ್ಕಳು ಪ್ರತಿಭಾವಂತರು. ಮಳೆಗಾಲದಲ್ಲಿ ಎರಡು ಕೆರೆಗಳು ತುಂಬಿದರೆ ಗ್ರಾಮ ಮತ್ತು ಶಾಲೆಯ ನಡುವೆ ಸಂಪರ್ಕವೇ ಕಳಚಿ ಬಿಡುತ್ತದೆ.
ಸಂಜೆ ವೇಳೆ ಮನೆ ತಲುಪುವುದು ತಡವಾಗದಿರಲಿ ಎಂದು ಶಾಲೆಯಿಂದ ಅವರನ್ನು ಬೇಗನೇ ಕಳುಹಿಸುತ್ತೇವೆ~ ಎಂದು ಹಳೇಹಳ್ಳಿಯ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲಕ್ಷ್ಮಣರೆಡ್ಡಿ ತಿಳಿಸಿದರು.

`ನಮ್ಮ ಹಳ್ಳಿ ಜನರು ಅಸ್ವಸ್ಥಗೊಂಡರೆ, ಅಂಬುಲೆನ್ಸ್ ಸೌಲಭ್ಯವಿರಲಿ ಯಾವುದೇ ವಾಹನ ಕೂಡ ಬರುವುದಿಲ್ಲ. ಅಸ್ವಸ್ಥರನ್ನು ಅನಿವಾರ್ಯವಾಗಿ ಜೋಲಿಯಲ್ಲಿ ಹಾಕಿಕೊಂಡು 5 ಕಿ.ಮೀ.ದಷ್ಟು ದೂರ ನಡೆದುಕೊಂಡು ಹೋಗಿ ಚಿಂತಾಮಣಿ, ಈ. ತಿಮ್ಮಸಂದ್ರ ಅಥವಾ ದಿಬ್ಬೂರಹಳ್ಳಿ ಆಸ್ಪತ್ರೆಗೆ ಹೋಗಬೇಕು~ ಎಂದು ಗ್ರಾಮದ ಲಕ್ಷ್ಮಿದೇವಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

`ದಿನಸಿ ಖರೀದಿಗೆ 5 ರಿಂದ 8 ಕಿ.ಮೀ. ದೂರದ ಹಳೇಹಳ್ಳಿ, ಈ.ತಿಮ್ಮಸಂದ್ರ ಅಥವಾ ಕೋರ‌್ಲ ಪರ್ತಿಗೆ ಹೋಗಬೇಕು. ಮಳೆಯಾಶ್ರಿತ ಜಮೀನು ಗಳಿದ್ದರೂ ಅದರಲ್ಲಿ ಉತ್ಪತ್ತಿ ಅಷ್ಟಕ್ಕಷ್ಟೇ. ಹಾಗಾಗಿ ದಿನಗೂಲಿಗಳಾಗಿ ಹಳೇಹಳ್ಳಿ, ಕರಿಯಪ್ಪನಹಳ್ಳಿಗಳಿಗೆ ಹೋಗು ತ್ತಾರೆ. ನಮ್ಮೂರಿಗೆ ಬೇರೆ ಗ್ರಾಮದವರು ಹೆಣ್ಣು ಕೊಡುವುದಿಲ್ಲ ಎಂದು ಗ್ರಾಮದ ನಾರಾಯಣಪ್ಪ ತಮ್ಮ ಅಳಲು ತೋಡಿಕೊಂಡರು.

`ನಮ್ಮಂತೆ ನಮ್ಮ ಮಕ್ಕಳ ಬಾಳು ಆಗದಿರಲೆಂದು ನಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದೇವೆ. ನಮಗೆ ಈ ಗ್ರಾಮ ತೊರೆಯಬೇಕೆಂದು ಸಾಕಷ್ಟು ಸಲ ಅನ್ನಿಸಿದರೂ ಬೇರೆಲ್ಲಿ ಹೋಗಿ ಬದುಕುವುದು ಎಂಬ ಚಿಂತೆ ಕಾಡುತ್ತದೆ. ಕೆಲ ಕುಟುಂಬಗಳು ನಮ್ಮ ಹಳ್ಳಿ ಬಿಟ್ಟು ಬೇರೆಡೆಗೆ ವಲಸೆ ಹೋಗಿದ್ದಾರೆ. ನಮಗೆ ಮುಖ್ಯವಾಗಿ ರಸ್ತೆ ಬೇಕು ಎಂದು ಈ ಗ್ರಾಮದ ಹಿರಿಯಜ್ಜ ದೊಡ್ಡಕೊಂಡಪ್ಪ ತಿಳಿಸಿದರು.
ಡಿ.ಜಿ.ಮಲ್ಲಿಕಾರ್ಜುನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.