ಶ್ರೀನಿವಾಸಪುರ: ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಾಲ. ಪಿಯುಸಿ ಪರೀಕ್ಷೆ ಈಗಾಗಲೇ ಆರಂಭವಾಗಿದೆ. ಇನ್ನೂ ಪ್ರಾಥಮಿಕ-ಪ್ರೌಢಶಾಲೆಗಳ ಪರೀಕ್ಷೆಗೆ ಕ್ಷಣ ಗಣನೆ ಆರಂಭವಾಗಿದೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾತ್ರ ತಮ್ಮ ದೈನಂದಿನ ದೈಹಿಕ ಕೆಲಸದಿಂದ ದೂರವಾಗಿಲ್ಲ.

ಹಳ್ಳಿ ವಿದ್ಯಾರ್ಥಿಗಳು ಓದಿನ ಜೊತೆಗೆ ಮನೆ ಕೆಲಸವನ್ನು ಮಾಡಲೇ ಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ. ಗಂಡು ಮಕ್ಕಳಾದರೆ ಸೌದೆ ತರಬೇಕು. ಹಾಲು ಕರೆದು ಡೇರಿಗೆ ಹಾಕಬೇಕು. ತೋಟದಲ್ಲಿ ನೀರು ಕಟ್ಟಬೇಕು. ಹೆಣ್ಣು ಮಕ್ಕಳು ಬೆಳಿಗ್ಗೆ ಹುಲ್ಲಿಗೆ ಹೋಗಬೇಕು. ಕೆಲವು ಸಲ ತೋಟದಲ್ಲಿ ಹಿರಿಯರೊಂದಿಗೆ ದುಡಿಯಬೇಕು.
ಈಚಿನ ವರ್ಷಗಳಲ್ಲಿ ಗ್ರಾಮೀಣ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಕೆಲಸದ ಅನಿವಾರ್ಯತೆಯನ್ನು ಅರಿತ ಮಕ್ಕಳು ಓದು , ಕೆಲಸವನ್ನು ಒಟ್ಟಿಗೆ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.