ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ ಜಾರಿಯಾಗಲಿ: ಶಾಸಕ

Last Updated 27 ಜನವರಿ 2012, 11:45 IST
ಅಕ್ಷರ ಗಾತ್ರ

ಗೌರಿಬಿದನೂರು: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶೀಘ್ರ ವೇ ಎತ್ತಿನಹೊಳೆ ಯೋಜನೆ ಯನ್ನು ಜಾರಿಗೊಳಿಸಿ ತದನಂತರ ಜಿ.ಎಸ್ . ಪರಮಶಿವಯ್ಯ ವರದಿ ಆಧರಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರ, `ಜಿಲ್ಲೆಗಳಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆಯನ್ನು ಹಂತಹಂತವಾಗಿ ಪರಿಹರಿಸಬೇಕು~ ಎಂದರು.

ಪಟ್ಟಣದಲ್ಲಿ  ಬಹುತೇಕ ರಸ್ತೆಗಳಿಗೆ ಡಾಂಬರೀಕರಣಗೊಂಡಿದ್ದು, ತಿಪ್ಪಗಾನಹಳ್ಳಿ ಗ್ರಾಮದಿಂದ ಆಂಧ್ರ ಪ್ರದೇಶದ ಗಡಿಭಾಗದವರೆಗೂ  ರಾಷ್ಟ್ರೀಯ ಹೆದ್ದಾರಿಯು 10 ಲಕ್ಷ ರೂಪಾಯಿಗಳಲ್ಲಿ ಡಾಂಬರೀಕರಣ ಕಾಮಗಾರಿ ಆರಂಭಗೊಳ್ಳಲಿದೆ. ಸಕ್ಕರೆ ಕಾರ್ಖಾನೆಯ ಕಿಂಡಿ ಅಣೆಕಟ್ಟಿನಿಂದ ಕೆಲವೇ ದಿನಗಳಲ್ಲಿ ಕುಡಿಯುವ ಸಿಹಿ ನೀರು ಪಟ್ಟಣದ ಎಲ್ಲಾ ವಾರ್ಡ್ ಗಳಿಗೂ ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದರು.
 

ತಹಶೀಲ್ದಾರ್ ಡಾ.ಬಿ.ಸುಧಾ ಮಾತನಾಡಿದರು. ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ, ಎನ್‌ಎಸ್‌ಸಿ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಬಿಇಒ ಶಮೀಮ್‌ತಾಜ್, ಸರ್ಕಲ್ ಇನ್ಸ್ ಪೆಕ್ಟರ್ ಛಬ್ಬಿ, ತಾ.ಪಂ. ಅಧ್ಯಕ್ಷ ಶ್ರೀನಿವಾಸ್, ಪುರ ಸಭೆ ಅಧ್ಯಕ್ಷೆ ಪ್ರಮೀಳಾ ಬಾಲಾಜಿ, ಉಪಾಧ್ಯಕ್ಷ ವಿ. ರಮೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ್‌ರಾವ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಾಂಶುಪಾಲ ಅಸಾದುಲ್ಲಾಖಾನ್, ದೈಹಿಕ  ಶಿಕ್ಷಕ ರಾದ ನಾರಾಯಣ ಸ್ವಾಮಿ, ಶ್ರೀನಿ ವಾಸ್ ಉಪಸ್ಥಿತರಿದ್ದರು.

ಸಂಭ್ರಮದ ಗಣರಾಜ್ಯೋತ್ಸವ

ಬಾಗೇಪಲ್ಲಿ: ಗಾಂಧೀಜಿ, ನೆಹರೂ, ವಲ್ಲಭಬಾಯಿ ಪಟೇಲ್ ಅವರಂತಹ ಮಹನೀಯರು ಇಂದಿನ ಯುವ ಜನರಿಗೆ ಆದರ್ಶವಾಗಬೇಕಿದೆ ಎಂದು ಶಾಸಕ ಎನ್.ಸಂಪಂಗಿ ಅಭಿಪ್ರಾಯ ಪಟ್ಟರು.

ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 63ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಒಂದು ಗೂಡಿಸಿ, 1956ರ ಜನವರಿ 26 ರಂದು ಗಣರಾಜ್ಯ ಸ್ಥಾಪಿಸಲಾ ಯಿತು. ಆದರೆ, ಇಂದು ಪೊಲೀಸರ ರಕ್ಷಣೆ ಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕಿದೆ ಎಂದು ಅವರು  ವಿಷಾದಿಸಿದರು.

ತಾಲ್ಲೂಕಿನ ಗ್ರಾಮ ಪಂಚಾಯಿ ತಿಗಳ ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಬಾಗೇಪಲ್ಲಿ ಪಟ್ಟಣ ದಲ್ಲಿ ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಟಿ.ಎ. ಹನುಮಂತ ರಾಯ ಧ್ವಜಾರೋಹಣ ನೆರವೇರಿಸಿ ದರು. ಪುರಸಭೆ ಅಧ್ಯಕ್ಷೆ ಸುಜಾತಮ್ಮ, ಸದಸ್ಯ ಚಂದ್ರಶೇಖರ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT