ಚಿಕ್ಕಬಳ್ಳಾಪುರ: ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಅನ್ಯಾಯ, ಅಕ್ರಮದ ವಿರುದ್ಧ ಮಹಿಳೆಯರು ಹೋರಾಟ ಮಾಡಿದ್ದಲ್ಲಿ ಮಾತ್ರ ನ್ಯಾಯ ದೊರೆಯುತ್ತದೆ. ಯಾವುದೇ ಕಾರಣಕ್ಕೂ ಎದೆ ಗುಂದದೇ ಮಹಿಳೆಯರು ಮುನ್ನಡೆಯಬೇಕು ಎಂದು ವಕೀಲರಾದ ಯೋಗೇಶ್ವರಿ ವಿಜಯ್ ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. `ಧೈರ್ಯವಾಗಿ ಮುನ್ನುಗ್ಗಿದಲ್ಲಿ ಮಾತ್ರವೇ ಮಹಿಳೆ ಯರು ಯಶಸ್ಸು ಗಳಿಸಲು ಸಾಧ್ಯ~ ಎಂದು ಯೋಗೇಶ್ವರಿ ಹೇಳಿದರು
`ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಅಥವಾ ಸ್ವ-ಉದ್ಯೋಗ ಕಂಡುಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗ ಬಹುದು.

ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿಸಿ ಕೊಳ್ಳು ವುದರಿಂದ ಕುಟುಂಬ ನಿರ್ವಹಿಸಬಹುದು. ಇತರ ಕಾರ್ಯಗಳಲ್ಲೂ ತೊಡಗಿಕೊಳ್ಳಬಹುದು~ ಎಂದು ಅವರು ತಿಳಿಸಿದರು.`ಎಂಥದ್ದೇ ಸಮಸ್ಯೆ, ಸಂಕಷ್ಟ ಮತ್ತು ಸವಾಲುಗಳು ಎದುರಾದರೂ ಮಹಿಳೆಯರು ದೃತಿಗೆಡಬಾರದು. ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಸದಾ ಕಾಯ್ದುಕೊಳ್ಳಬೇಕು~ ಎಂದು ವಿಜಯ್ ಸಲಹೆ ನೀಡಿದರು.

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎನ್.ಕವನಾ, ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ಸಂಚಾಲಕರಾದ ರತ್ನಮ್ಮ, ಎನ್.ನಾರಾಯಣಸ್ವಾಮಿ, ವಿ.ಗೋಪಾಲ್, ಸಿ.ಎಂ.ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಬಸ್ ಡಿಕ್ಕಿ: ಗಾಯ

ಕೋಲಾರ: ಕೆಟ್ಟು ನಿಂತಿದ್ದ ಲಾರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಡಿಕ್ಕಿ ಹೊಡೆದು ಲಾರಿ ಮಾಲೀಕ ಮತ್ತು ಚಾಲಕ ತೀವ್ರ ಗಾಯಗೊಂಡಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ 4ರ ಆರ್.ವಿ. ಶಾಲೆ ಸಮೀಪ ಗುರುವಾರ ರಾತ್ರಿ ನಡೆದಿದೆ. ಇಬ್ಬರಿಗೂ ತಲೆಯ ಭಾಗದಲ್ಲಿ ತೀವ್ರ ಪೆಟ್ಟಾಗಿದೆ. ಲಾರಿಯಲ್ಲಿದ್ದ ಮಹಿಳೆಗೆ ಮತ್ತು ಬಸ್ನಲ್ಲಿದ್ದ ಕೆಲವರಿಗೂ ಸಣ್ಣ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಬಹಿರಂಗ: ಕಠಿಣ ಕ್ರಮ
ಕೋಲಾರ: ವ್ಯವಸ್ಥೆಯ ವೈಫಲ್ಯದಿಂದಾಗಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿದ್ದು, ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಾರದ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.