ಚಿಕ್ಕಮಗಳೂರು: ತಾಲ್ಲೂಕಿನ ಕಂಬಿಹಳ್ಳಿಯಲ್ಲಿ ಭದ್ರಾ ವನ್ಯಜೀವಿ ಸಂರಕ್ಷಣ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್, ಇತರರ ಮೇಲೆ ಯುವಕರ ಗುಂಪೊಂದು ಈಚೆಗೆ ಹಲ್ಲೆ ನಡೆಸಿದ ಪ್ರಕರಣ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಏಳು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿಗಳ ಜಾಡಿನ ಬೆನ್ನತ್ತಿದ ಮೂರು ತಂಡಗಳು ಕೊಡಗು, ಬಳ್ಳಾರಿ, ಇತರ ಜಿಲ್ಲೆಗಳಿಗೆ ತೆರಳಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಹಿತ ಇತರ ಆರು ಮಂದಿ ಸಿಕ್ಕಿಬಿದ್ದಿದ್ದಾರೆ.

ಪತ್ತೆಯಾಗಿರುವ ಆರೋಪಿಗಳು ಕಂಬಿಹಳ್ಳಿ, ಹೊಸಪೇಟೆ, ಸುತ್ತಲಿನ ಭಾಗದವರು. ಆರೋಪಿಗಳ ವಿಚಾರಣೆ ನಡೆಸಿದ ಹಲ್ಲೆಯ ಕಾರಣಗಳು ಗೊತ್ತಾಗಲಿವೆ. ಈಗಾಗಲೇ ಆರೋಪಿಗಳ ಹಿನ್ನೆಲೆ, ಅಭ್ಯಾಸ, ಚಟುವಟಿಕೆಗಳು ಮೊದಲಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ಬಗ್ಗೆ ಗ್ರಾಮಸ್ಥರು, ಸ್ನೇಹಿತರಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.