ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳಸ | ಆರು ತಿಂಗಳಲ್ಲಿ 81.6 ಸೆಂ.ಮೀ ಮಳೆ

ಜನವರಿ– ಜೂನ್‌ ಅವಧಿಯಲ್ಲಿ ಮಳೆ ಪ್ರಮಾಣ ಮೂರು ಪಟ್ಟು ಹೆಚ್ಚಳ
Published 6 ಜುಲೈ 2024, 7:25 IST
Last Updated 6 ಜುಲೈ 2024, 7:25 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ– ಜೂನ್‌ ಅಂತ್ಯದವರೆಗೆ (6 ತಿಂಗಳು) ಸುರಿದ ಮಳೆಗೆ ಹೋಲಿಸಿದರೆ ಈ ಬಾರಿ ಅದರ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ.

2023ರಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ ಒಟ್ಟು 29 ಸೆಂ.ಮೀ (11.6 ಇಂಚು) ಮಳೆ ಆಗಿತ್ತು. ಈ ಬಾರಿ ಇದೇ ಅವಧಿಯಲ್ಲಿ 81.6 ಸೆಂ.ಮೀ (32.6 ಇಂಚು) ಮಳೆಯಾಗಿದೆ.

2023ರ ಜನವರಿಯಿಂದ ಮಾರ್ಚ್‌ವರೆಗೆ ಕೇವಲ 0.26 ಸೆಂ.ಮೀ ಮಾತ್ರ ಮಳೆಯಾಗಿತ್ತು. ಆದರೆ, ಈ ಬಾರಿ ಇದೇ ಅವಧಿಯಲ್ಲಿ 4.24 ಸೆಂ.ಮೀ ಮಳೆಯಾಗಿದೆ. ಜನವರಿ– ಮಾರ್ಚ್‌ ನಡುವಿನ ಮೂರು ತಿಂಗಳ ಅವಧಿಯಲ್ಲಿ ಉತ್ತಮ ಮಳೆ ಲಭಿಸಿರುವುದರಿಂದ ತೋಟಗಾರಿಕಾ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸಿಗೆ ವರದಾನವಾಗಿದೆ.

2023ರ ಏಪ್ರಿಲ್‍ನಿಂದ ಜೂನ್‍ವರೆಗೆ 28.8 ಸೆಂ.ಮೀ(11.5 ಇಂಚು) ಮಳೆ ಆಗಿತ್ತು. ಇದರಿಂದ ಕಾಫಿ ಅಡಿಕೆ ಮತ್ತು ಕಾಳುಮೆಣಸಿಗೆ ನೀರಿನ ಕೊರತೆ ಎದುರಾಗಿತ್ತು. ಈ ವರ್ಷ ಏಪ್ರಿಲ್‍ನಿಂದ ಜೂನ್‍ವರೆಗೆ 77.4 ಸೆಂ.ಮೀ.(31 ಇಂಚು) ಮಳೆಯಾಗಿದೆ. ಇದರಿಂದ ಬೇಸಿಗೆಯ ತಾಪದ ನಡುವೆಯೂ ಅಡಿಕೆ, ಕಾಫಿ ಮತ್ತು ಕಾಳುಮೆಣಸಿಗೆ ಅಗತ್ಯವಿರುವ ತೇವಾಂಶ ಲಭಿಸಿದಂತಾಗಿದೆ.

ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 235 ಸೆಂ.ಮೀ(94 ಇಂಚು) ಮಳೆಯಾಗಿತ್ತು. ಈ ವರ್ಷ ಈಗಾಗಲೇ ಅಂದರೆ 6 ತಿಂಗಳಲ್ಲೇ ಸರಾಸರಿ ಇದರ ಅರ್ಧದಷ್ಟು ಮಳೆ ಸುರಿದಿದೆ. ಕಳಸದ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 300 ಸೆಂ.ಮೀ (120 ಇಂಚು), ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿದೆ.

ಈಗಾಗಲೇ ಸಾಕಷ್ಟು ಮಳೆ ಲಭಿಸಿರುವುದರಿಂದ ಇನ್ನೂ ಭಾರಿ ಮಳೆ ಮುಂದುವರಿದರೆ ಅದರಿಂದ ತೇವಾಂಶ ಹೆಚ್ಚಿ, ಬೆಳೆಗಳು ಹಾನಿಯಾಗುವ ಅಪಾಯವೂ ಇದೆ. ಈಗಾಗಲೇ ತಾಲ್ಲೂಕಿನ ಅಲ್ಲಲ್ಲಿ ಕಾಫಿಗೆ ಕಪ್ಪುಕೊಳೆ ರೋಗ ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT