ಶುಕ್ರವಾರ, ಮೇ 27, 2022
26 °C

ದ್ವಿಚಕ್ರ ವಾಹನ-ಕ್ಯಾಂಟರ್‌ ಡಿಕ್ಕಿ; ಒಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತಾಲ್ಲೂಕಿನ ಲಕ್ಯಾ ಕ್ರಾಸ್‌ ಬಳಿ ಬುಧವಾರ ದ್ವಿಚಕ್ರವಾಹನ ಮತ್ತು ಕ್ಯಾಂಟರ್‌ (ಲಾರಿ) ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಾಹಿದ್ ಬಾಷಾ (30) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಶಾಹಿದ್ ಚಿಕ್ಕಮಗಳೂರಿನ ನೆಹರು ನಗರದವರು. ಹಿಂಬದಿ ಸವಾರ ಕಲ್ದೊಡ್ಡಿಯ ಇರ್ಫಾನ್‌ ತೀವ್ರ ಗಾಯಗೊಂಡಿದ್ದು ಮಂಗಳೂರಿಗೆ ಆಸ್ಪತ್ರೆಗೆ ಒಯ್ಯಲಾಗಿದೆ.

ಶಾಹಿದ್‌ ಅವರು ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಯಗಟಿಗೆ ಸಾಗುತ್ತಿದ್ದರು. ಕ್ಯಾಂಟರ್‌ ಚಿಕ್ಕಮಗಳೂರು ಕಡೆಗೆ ಬರುತ್ತಿತ್ತು. ಲಕ್ಯಾ ಕ್ರಾಸ್‌ ಬಳಿ ದತ್ತಾತ್ರೇಯ ನರ್ಸರಿ ತಿರುವಿನಲ್ಲಿ ಅವಘಡ ಸಂಭವಿಸಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು