ರೋಗ ನಿಯಂತ್ರಣಕ್ಕೆ ಸೂಚಿಸಿರುವ ಔಷಧ ಮತ್ತು ಗೊಬ್ಬರ ತರಲು ರೈತನಲ್ಲಿ ಶಕ್ತಿ ಇಲ್ಲ. ಸರ್ಕಾರವೇ ಶೇ 75ರಷ್ಟು ಸಹಾಯಧನ ನೀಡಬೇಕು. ಅಡಿಕೆ ಬೆಳೆಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು.
ತಲವಾನೆ ಪ್ರಕಾಶ್ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ
ಅಡಿಕೆ ತೋಟಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಈ ವರ್ಷದ ಅಡಿಕೆ ಫಸಲು ಸರ್ವಕಾಲಿಕ ಕನಿಷ್ಠ ಆಗಿದೆ. ಸರ್ಕಾರ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು. ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು.