ತರೀಕೆರೆ: ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕಾಗುತ್ತದೆ ಎಂದು ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಉಮಾದೇವಿ ದಯಾನಂದ ಹೇಳಿದರು.

ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ವತಿಯಿಂದ ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಭದ್ರಾವತಿ ಸಿದ್ದಾರ್ಥ ಅಂಧರ ಕೇಂದ್ರದ ವಿದ್ಯಾರ್ಥಿಗಳಿಗೆ ವಾಕಿಂಗ್ ಸ್ಟಿಕ್, ಟಾಕಿಂಗ್ ವಾಚ್ ವಿತರಣೆ, ಸಾರ್ವಜನಿಕರಿಗೆ ನೇತ್ರದಾನದ ಅರಿವು, ನೇತ್ರ ತಪಾಸಣೆ, ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರೋಟರಿ ಕ್ಲಬ್ ಸದಸ್ಯ, ಮಕ್ಕಳ ರೋಗ ತಜ್ಞ ಡಾ.ಗಿರೀಶ್ ಮಾತನಾಡಿ, ಮಕ್ಕಳಲ್ಲಿ ಅಂಧತ್ವಕ್ಕೆ ಕಾರಣ, ಲಕ್ಷಣ ಹಾಗೂ ತಡೆಯುವ ವಿಧಾನದ ಬಗ್ಗೆ ತಿಳಿಸಿದರು.

ರೋಟರಿ ಅಧ್ಯಕ್ಷ ರಾಕೇಶ್ ಜಿ.ಸಿ., ಕಾರ್ಯದರ್ಶಿ ರವಿ ಪುರದಪ್ಪ, ಇನ್ನರ್ವೀಲ್ ಕ್ಲಬ್ ಕಾರ್ಯದರ್ಶಿ ಸುನಿತಾ ಕಿರಣ್, ಡಾ.ಪ್ರಜಕ್ತ, ನೇತ್ರ ತಜ್ಞ ಡಾ.ಧಾರಾನೇಂದ್ರ ದಿನಕರ್, ಸದಸ್ಯರಾದ ಡಾ.ಕಿಶೋರ್ಕುಮಾರ್, ರೆಡ್ ಕ್ರಾಸ್ ಸಂಸ್ಥೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ, ಶಿವಮೊಗ್ಗ, ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ತರೀಕೆರೆ, ಜಾನಪದ ಸಾಹಿತ್ಯ ಪರಿಷತ್, ತರೀಕೆರೆ, ಸೀನಿಯರ್ ಚೇಂಬರ್ಇಂಟರ್ ನ್ಯಾಷನಲ್ ಕ್ಲಬ್, ಮಮತಾ ಮಹಿಳಾ ಸಮಾಜ, ಕನಕ ಮಹಿಳಾ ಸಮಾಜ, ರೋಟರಿ ಕ್ಲಬ್ ಸದಸ್ಯರು, ಇನ್ನರ್ ವೀಲ್ ಕ್ಲಬ್ ಸದಸ್ಯೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.