ಬಾಬಾ ಬುಡನ್‌ಗಿರಿ: ವಿಚಾರಣೆ ಮುಂದೂಡಿಕೆ

7

ಬಾಬಾ ಬುಡನ್‌ಗಿರಿ: ವಿಚಾರಣೆ ಮುಂದೂಡಿಕೆ

Published:
Updated:

ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ನೀಡಲಾಗಿರುವ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಮುಂದುವರಿಸಿದೆ.

ನಾಗಮೋಹನ ದಾಸ್‌ ಸಮಿತಿ ವರದಿ ಅಂಗೀಕರಿಸಿ ರಾಜ್ಯ ಸರ್ಕಾರ 2018ರ ಮಾರ್ಚ್ 19ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಸಂವರ್ಧನಾ ಸಮಿತಿಯ ಧರ್ಮಶ್ರೀ, ಕರ್ತಿಕೆರೆ ನಿವಾಸಿ ಯೋಗೀಶ್‌ ರಾಜ್‌ ಅರಸ್‌ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ಸೋಮವಾರ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ  ಮುಂದೆ ಬಂದಿತು.

ಆದರೆ, ಕೋರ್ಟ್‌ ಕಲಾಪದ ದಿನದ ಅವಧಿ ಮುಕ್ತಾಯವಾದ ಕಾರಣ ವಿಚಾರಣೆ ನಡೆಯಲಿಲ್ಲ. ಅರ್ಜಿ ವಿಚಾರಣೆಯನ್ನು ಆಗಸ್ಟ್‌ 2ಕ್ಕೆ ಮುಂದೂಡಲಾಗಿದೆ.

‘ಈ ಹಿಂದಿನ ರಾಜ್ಯ ಸರ್ಕಾರವು ನಾಗಮೋಹನ ದಾಸ್ ಸಮಿತಿ ರಚನೆ ಮಾಡುವ ಮೂಲಕ ಸುಪ್ರೀಂ ಕೋರ್ಟ್‌ಗೆ ನೀಡಿದ ವಾಗ್ದಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಅಂತೆಯೇ ಸಮಿತಿಯು, ವ್ಯಾಜ್ಯದಲ್ಲಿ ಹಿತಾಸಕ್ತಿ ಹೊಂದಿರುವವರ ವಾದ, ಆಕ್ಷೇಪಣೆ ಅಭಿಪ್ರಾಯ ಆಲಿಸದೆ ತೀರ್ಮಾನ ಕೈಗೊಂಡು ವ್ಯತಿರಿಕ್ತ ವರದಿ ಸಲ್ಲಿಸಿದೆ’ ಎಂಬುದು ಅರ್ಜಿದಾರರ ವಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !