ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿತೆ

Published 9 ಆಗಸ್ಟ್ 2023, 15:51 IST
Last Updated 9 ಆಗಸ್ಟ್ 2023, 15:51 IST
ಅಕ್ಷರ ಗಾತ್ರ

ಕುಂದೂರು (ಬಾಳೆಹೊನ್ನೂರು): ಇಲ್ಲಿನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಡ್ಡದಬಂಗ್ಲೆ ಪ್ರದೀಪ್ ಹೆಗ್ಡೆ ಅವರ ಗದ್ದೆಯಲ್ಲಿ ಭತ್ತದ ಸಸಿಮಡಿ ತಯಾರಿ, ನಾಟಿ ಕುರಿತ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಆಯೋಜಿಸಿತ್ತು.

ಕುಂದೂರಿನ ಕೃಷಿಕ ಗುರುವಪ್ಪಗೌಡ, ಮುಂದಿನ ಪೀಳಿಗೆಯ ಮಕ್ಕಳಿಗೆ ಭತ್ತ ಬೆಳೆಯುವು ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಈಗಿನ ಯುವಕರು ಕೃಷಿಯಿಂದ ವಿಮುಖರಾಗಿ ಪಟ್ಟಣ ಸೇರುತ್ತಿದ್ದಾರೆ. ಮಲೆನಾಡಿನ ಗದ್ದೆಗಳು ನಿಧಾನವಾಗಿ ಅಡಿಕೆ, ಕಾಫಿ ತೋಟಗಳಾಗುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಮರೆಯಾಗುವುದು ನಿಶ್ಚಿತ. ಭತ್ತ ಬದುಕಿನ ಭಾಗವಾಗಿದ್ದು ಗದ್ದೆ ಹೊಂದಿರುವ ಎಲ್ಲರೂ ಕನಿಷ್ಟ ಮನೆಯ ಖರ್ಚಿಗಾಗುವಷ್ಟಾದರೂ ಬೆಳೆಯಬೇಕು ಎಂದು ಸಲಹೆ ನೀಡಿದರು.

ಸಂದರ್ಭದಲ್ಲಿ ರೋಟರಿ ಸದಸ್ಯರಿಗೆ ಕೆಸರುಗದ್ದೆ ವಾಲಿಬಾಲ್, ಓಟ, ಹಗ್ಗಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಓಡೆಯುವ ಸ್ಪರ್ಧೇಗಳನ್ನು ಆಯೋಜಿಸಲಾಗಿತ್ತು.

ಜಯಪುರ ರೋಟರಿ ಕ್ಲಬ್ ಅಧ್ಯಕ್ಷೆ ಸ್ಮಿತಾ ಸುರೇಶ್,ಕಾರ್ಯದರ್ಶಿ ರಮೇಶ್, ಖಜಾಂಚಿ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT