ಬಾಳೆಹೊನ್ನೂರು: ಪಟ್ಟಣ ಸಮೀಪದ ಭದ್ರಾ ಕಾಫಿ ಎಸ್ಟೇಟ್ಗೆ ಬೆಲ್ಜಿಯಂನ ಕಾಫಿ ಉದ್ಯಮಿಗಳು ಭೇಟಿ ನೀಡಿ ಮಾಹಿತಿ ಪಡೆದರು.

ಭದ್ರಾ ಕಾಫಿ ಎಸ್ಟೇಟ್ ಕಾಫಿ ಕಪ್ ಟೆಸ್ಟಿಂಗ್, ಪೈನ್ ಕಫ್ ಆವಾರ್ಡ್ ಸೇರಿದಂತೆ ಮೂರು ವಿಭಾಗದಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ಮಹಿಳೆಯರು ಸೇರಿ ಒಟ್ಟು 13 ಜನರ ತಂಡವು ಎಸ್ಟೇಟ್ನ ಕಾಫಿ ತೋಟ, ರೋಸ್ಟಿಂಗ್, ಪಲ್ಪರಿಂಗ್, ಪ್ರೋಸಸಿಂಗ್ ಯೂನಿಟ್, ಕಾಫಿ ಒಣಗಿಸುವ ಕಣಗಳಿಗೆ ಭೇಟಿ ನೀಡಿ ವಿವರವಾದ ಮಾಹಿತಿ ಪಡೆದರು.

ತೋಟದಲ್ಲಿನ ಅಂಗನವಾಡಿ, ಇಲ್ಲಿನ ಕಾರ್ಮಿಕರ ಮನೆಗಳಿಗೂ ಭೇಟಿ ನೀಡಿದರು. ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬೆಲ್ಜಿಯಂನ ಕಾಫಿ ಕಫ್ ಟೇಸ್ಟರ್ ಪ್ಯಾಟ್ರಿಕ್ ಹನ್ಸೆಸ್, ನಮ್ಮ ದೇಶದಲ್ಲಿ ಪ್ರಮುಖವಾಗಿ ಅರೇಬಿಕಾ ಕಾಫಿ ಬಳಕೆ ಮಾಡುತ್ತಿದ್ದೇವೆ. ವಿಯಟ್ನಾಂ, ಬ್ರೇಜಿಲ್, ಕಾಂಬೋಡಿಯಾದಿಂದ ಕಾಫಿಯನ್ನು ಅಮದು ಮಾಡಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಭಾರತದ ರೋಬೆಸ್ಟಾ ಕಾಫಿ ಕಫ್ ಟೇಸ್ಟಿಂಗ್ ನೋಡಿ ಅಮದು ಮಾಡಿಕೊಳ್ಳುವ ಯೋಚನೆಯಲ್ಲಿದ್ದೇವೆ. ನಮ್ಮ ಭಾಗದಲ್ಲಿ ಬ್ಲಾಕ್ ಕಾಫಿ ಹೆಚ್ಚು ಜನಪ್ರಿಯವಾಗಿದೆ ಎಂದರು.

ಭದ್ರಾ ಕಾಫಿ ಎಸ್ಟೇಟ್ನ ಮಾಲೀಕ ಜೇಕಬ್ ಮಮನ್, ವ್ಯವಸ್ಥಾಪಕ ಭವಾನಿ ಸಿಂಗ್ ರಾಠೋಡ್, ಗ್ರೂಪ್ ಮ್ಯಾನೇಜರ್ ಸನಿಲ್ ಚತುರ್ವೇದಿ, ಧೃತಿ ಅಯ್ಯಪ್ಪ, ವಿನೋದ್ ಉದ್ಯಮಿಗಳಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.