ಆಲ್ದೂರು: 2025ರ ಅಕ್ಷೋಬರ್ನಲ್ಲಿ ನಡೆದ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಹಾಂದಿ ಸಮೀಪದ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ಹಿಪ್ಲಾ ಹೋಂಸ್ಟೆ ಮಾಲೀಕ ಸುಧಾಕರ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಂಜಿತಾ ಅವರು 2025ರ ಅಕ್ಟೋಬರ್ 25ರಂದು ಬೆಂಗಳೂರಿನಿಂದ ಮಾಚಗೊಂಡನಹಳ್ಳಿ ಗ್ರಾಮದಲ್ಲಿರುವ ಹಿಪ್ಲಾ ಹೋಂಸ್ಟೆಗೆ ಸ್ನೇಹಿತೆಯ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಸ್ನೇಹಿತೆ ರೇಖಾ ಅವರೊಂದಿಗೆ ತಂಗಿದ್ದರು.

ಅದೇ ದಿನ ಬೆಳಿಗ್ಗೆ ರಂಜಿತಾ ಅವರ ಸ್ನೇಹಿತರು ರತನ್ ಅವರಿಗೆ ಕರೆ ಮಾಡಿ, ‘ನಿಮ್ಮ ಸಹೋದರಿ ಸ್ನಾನದ ಕೋಣೆಯಲ್ಲಿ ನಿತ್ರಾಣಗೊಂಡು ಬಿದ್ದಿದ್ದಾರೆ. ತಕ್ಷಣ ಬನ್ನಿ’ ಎಂದು ಮಾಹಿತಿ ನೀಡಿದ್ದರೆ. ನಂತರ ಅವರು ಹೊಯ್ಸಳ ವಾಹನದ ಮೂಲಕ ಮೂಡಿಗೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರಂಜಿತಾ ಅವರನ್ನು ಕರೆದುಕೊಂಡು ಹೋಗಿದ್ದು, ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಬಗ್ಗೆ ರತನ್ ಅವರು ಆಲ್ದೂರು ಠಾಣೆಗೆ ಅಸಹಜ ಸಾವಿನ ಬಗ್ಗೆ ದೂರು ನೀಡಿದ್ದರು. ಯುವತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಸ್ನಾನದ ಕೋಣೆಯಲ್ಲಿ ಅಳವಡಿಸಿದ್ದ ಗ್ಯಾಸ್ ಗೀಜರ್ನಿಂದ ಸೋರಿಕೆಯಾಗಿದ್ದ ಕಾರ್ಬನ್ ಮೋನಾಕ್ಸೈಡ್ ಅನಿಲವನ್ನು ಉಸಿರಾಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದರು.

ಸ್ನಾನದ ಕೋಣೆಯಲ್ಲಿ ಗಾಳಿ-ಬೆಳಕಿನ ವ್ಯವಸ್ಥೆ ಮಾಡದೆ ಹಿಪ್ಲಾ ಹೋಂಸ್ಟೆ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಸಾವು ಸಂಭವಿಸಿದೆ. ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಂಜಿತಾ ಅವರ ಸಹೋದರ ರತನ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.