ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ, ಲಾಠಿ ರುಚಿ ತೋರಿಸಿದ ಪೊಲೀಸರು

Published 7 ಜುಲೈ 2024, 16:46 IST
Last Updated 7 ಜುಲೈ 2024, 16:46 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಪ್ರಪಾತದ ತಡೆಗೋಡೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿ ಹುಚ್ಚಾಟ ಮೆರೆದವರಿಗೆ ಹೈವೇ ಪ್ಯಾಟ್ರೋಲ್ ಗಸ್ತು ವಾಹನದ ಪೊಲೀಸರು ಲಾಠಿ ರುಚಿ ತೋರಿಸಿದರು.

ಗಸ್ತು ವಾಹನ ಘಾಟಿಯ ವಿವಿಧೆಡೆ ಸಂಚರಿಸುತ್ತಿದಂತೆ ಪ್ರವಾಸಿಗರು ಜಲಪಾತದ ಕಲ್ಲಿನ ಮೇಲೆ ಹತ್ತಿ ಸಾಹಸ ಮೆರೆಯುತ್ತಿದ್ದರು. ಸೋಮನ ಕಾಡು ಪ್ರಪಾತದ ತಡೆಗೋಡೆ ಮೇಲೆ ಯುವಕ–ಯುವತಿಯರು ಫೋಟೋ ತೆಗೆಯುವುದು ಕೂಗಾಡುವ ದೃಶ್ಯ ಕಂಡು ಬಂತು.

ಪೊಲೀಸರ ಗಸ್ತು ಇದ್ದರೂ ಪ್ರವಾಸಿಗರು ಹುಚ್ಚಾಟ ಮರೆಯುವುದು ಸಾಮಾನ್ಯವಾಗಿದೆ. ಭಾನುವಾರವಾದ್ದರಿಂದ ಪ್ರವಾಸಿಗರು ಘಾಟಿಯಲ್ಲಿ ಜಲಪಾತದ ಬಳಿ ಜಮಾಯಿಸಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುವ ದೃಶ್ಯ ಕಂಡು ಬಂತು.

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಜಲಪಾತ, ಅಪಾಯದ ಸ್ಥಳದಲ್ಲಿ ಕಲ್ಲು ಹತ್ತಿ ಸಾಹಸ ಮಾಡುತ್ತಿದ್ದರು. ನಮ್ಮ ಗಸ್ತು ವಾಹನದ ಪೊಲೀಸರು ಅವರನ್ನು ಓಡಿಸಿದ್ದಾರೆ. ಮೋಜು ಮಸ್ತಿ ಮಾಡಿದ ಪ್ರವಾಸಿಗರಿಗೆ ದಂಡ ವಿಧಿಸಿ ಕೇಸು ದಾಖಲಿಸಲಾಗುವುದು ಎಂದು ಬಣಕಲ್ಸಬ್ ಇನ್‌ಸ್ಪೆಕ್ಟರ್‌ ಡಿ.ವಿ.ರೇಣುಕಾ ಹೇಳಿದರು.

ಚಾರ್ಮಾಡಿ ಘಾಟಿಯ ಪ್ರಫಾತದ ಬಳಿ ಪ್ರವಾಸಿಗರು ಜಮಾಯಿಸಿರುವುದು
ಚಾರ್ಮಾಡಿ ಘಾಟಿಯ ಪ್ರಫಾತದ ಬಳಿ ಪ್ರವಾಸಿಗರು ಜಮಾಯಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT