ಶುಕ್ರವಾರ, ನವೆಂಬರ್ 27, 2020
19 °C

ಕಳಸ: ನೀರಿನಲ್ಲಿ ಮುಳುಗಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ಇಲ್ಲಿಗೆ ಸಮೀಪದ ಸೂರುಮನೆ ಬಳಿ ಶನಿವಾರ ಮಧ್ಯಾಹ್ನ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

‘ಸೂರುಮನೆ ಬಳಿ ಜಲಪಾತ ವೀಕ್ಷಿಸಲು ಗುತ್ಯಡ್ಕದ ಶ್ರೀನಿವಾಸ ಗೌಡ ಅವರ ಮಗ ವಂಶಿತ್ (15) ತನ್ನ ಸ್ನೇಹಿತರ ಜೊತೆ ಮಧ್ಯಾಹ್ನ 2 ಗಂಟೆ ವೇಳೆಗೆ ತೆರಳಿದ್ದನು. ತನಗೆ ಈಜು ಬರುತ್ತದೆ ಎಂದು ಆಳದ ಪ್ರದೇಶದಲ್ಲಿ ಈಜಲು ತೆರಳಿದ್ದನು. ಇದನ್ನು ಕಂಡು ಜೊತೆಗೆ ಇದ್ದವರು ಎಚ್ಚರಿಕೆಯ ಮಾತನ್ನು ಆಡಿದರೂ ಕೇಳದೆ ಆಳದ ಪ್ರದೇಶದಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ’ ಎಂದು ಸಬ್ ಇನ್‌ಸ್ಪೆಕ್ಟರ್ ಮಂಜಯ್ಯ ಮಾಹಿತಿ ನೀಡಿದ್ದಾರೆ.

ಪ್ರೊಬೆಷನರಿ ಎಸಿಎಫ್‌ ಚೇತನ್ ಗಸ್ತಿ ಸ್ಥಳಕ್ಕೆ ಭೇಟಿ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.