ಗುರುವಾರ , ಸೆಪ್ಟೆಂಬರ್ 23, 2021
22 °C

ಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ:  ಬಿಜೆಪಿಯವರು ಕೆಲಸ ಮಾಡುವುದನ್ನು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ: ಖರ್ಗೆ

ಮೂಡಿಗೆರೆ ತಾಲ್ಲೂಕಿನ ಮಲೆಮನೆ ಗ್ರಾಮದಲ್ಲಿ ಮಳೆ ಹಾನಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮಳೆಗೆ ಮನೆ, ತೋಟ, ಹೊಲಗಳು ಹಾನಿಯಾಗಿವೆ. ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಹಾನಿಯ ಸಮಗ್ರ ವರದಿ ಪಡೆದು ಪುನರ್ವಸತಿಗೆ ಕ್ರಮ ವಹಿಸಲಾಗುವುದು' ಎಂದರು.

ಈಗ ಹಾನಿ ವಿವರ ಪಡೆಯುತ್ತಿದ್ದೇವೆ. ಅಧಿವೇಶನ ಕರೆದು ಅತಿವೃಷ್ಟಿ ಬಗ್ಗೆ ಚರ್ಚಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಉತ್ತರಿಸಿದರು. ಅದೇ ವೇಳೆ  ಖಾತೆ ಅಸಮಾಧಾನ, ಶಮನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

18ನಿಮಿಷಗಳಲ್ಲಿ ವೀಕ್ಷಣೆ: ಯಡಿಯೂರಪ್ಪ ಅವರು ಮಲೆಮನೆ ಅತಿವೃಷ್ಟಿ ಪ್ರದೇಶದಲ್ಲಿ 18 ನಿಮಿಷದಲ್ಲಿ ವೀಕ್ಷಣೆ ಮಾಡಿ, ಸಂತ್ರಸ್ತರೊಂದಿಗೆ ಮಾತನಾಡಿ ವಾಪಸ್ ತೆರಳಿದರು.
ಪುನರ್ವಸತಿಗಾಗಿ ಸಂತ್ರಸ್ತರು ಮುಖ್ಯಮಂತ್ರಿ ಎದುರು ಕಣ್ಣೀರಿಟ್ಟರು.

ಇದನ್ನೂ ಓದಿ: ನಿಮ್ಮ ಸರ್ಕಾರ ಟೇಕಾಫ್ ಆಗುವುದು ಯಾವಾಗ?: ಬಿಎಸ್‌ವೈಗೆ ಸಿದ್ದರಾಮಯ್ಯ ಪ್ರಶ್ನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು