ಚಿಕ್ಕಮಗಳೂರು: ‘ಅಸ್ಪಶ್ಯತೆ, ಶೋಷಣೆ ವಿರುದ್ಧ ದಿಟ್ಟತನದಿಂದ ಹೋರಾಡಿದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕತ್ತಲೆಯಲ್ಲಿ ಮುಳುಗಿದ್ದ ಜನರಿಗೆ ಬೆಳಕಾದರು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಹೇಳಿದರು.

ನಗರದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ತಾಲ್ಲೂಕು ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ಧ ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಸಂವಿಧಾನ ಸಮರ್ಪಣೆಗೂ ಮುನ್ನ ಶೋಷಿತರು, ಬಡವರು ಹಾಗೂ ಬಹುಸಂಖ್ಯಾತರ ಪರಿಸ್ಥಿತಿ ಹೇಳತೀರಾದಾಗಿತ್ತು. ದೌರ್ಜನ್ಯ, ದಬ್ಬಾಳಿಕೆ ಹಾಗೂ ತುಳಿತಕ್ಕೆ ಒಳಗಾಗಿದ್ಧ ಜನರನ್ನು ಮೇಲೆತ್ತಲು ವೈಯಕ್ತಿಕ ಬದುಕನ್ನು ಸಮರ್ಪಿಸಿದ ಅವರು ಸರ್ವರೂ ಸಮಾನರೆಂಬ ಕಾನೂನು ರೂಪಿಸಿದರು’ ಎಂದರು.

ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿದರು. ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಎಚ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ, ಕೆ.ಆರ್. ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್. ಮಂಜುಳಾ, ಆರ್. ವಸಂತ್, ಉಪಾಧ್ಯಕ್ಷ ಹೊನ್ನಪ್ಪ, ಸಿದ್ದಯ್ಯ, ಉಮಾಶಂಕರ್, ಕಾರ್ಯದರ್ಶಿ ಕಲಾವತಿ, ಖಜಾಂಚಿ ಟಿ.ಹೆಚ್.ರತ್ನ, ನಗರಾಧ್ಯಕ್ಷ ಡಿ.ಎಚ್.ವಿಜಯಕುಮಾರ್, ಮುಖಂಡರುಗಳಾದ ಮಂಜುಳಾ, ಎಚ್.ಕುಮಾರ್, ಸವಿತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.