ನಸಿಂಹರಾಜಪುರದ ಹಳೇಪೇಟೆಯ ಗಜಾನನ ಬಾಳೆಕಾಯಿಮಂಡಿಯಲ್ಲಿ ಮಾರಾಟಕ್ಕೆ ತಂದಿದ್ದ ಸುವರ್ಣಗೆಡ್ಡೆ
ಕಡಿಮೆಯಾಗುತ್ತಿರುವ ಬಾಳೆ ಬೆಳೆ
ಬಾಳೆಯನ್ನು ರಬ್ಬರ್ ಅಡಿಕೆ ಮಧ್ಯದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ರಬ್ಬರ್ ಅಡಿಕೆ ಗಿಡಗಳು ಬೆಳೆದು ತೋಟ ಅಭಿವೃದ್ಧಿಯಾಗಿರುವುದರಿಂದ ಅಂತರ್ ಬೆಳೆಯಾಗಿ ಬಾಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಬಾಳೆ ಬೆಳೆಯುತ್ತಿದ್ದ ಪ್ರದೇಶಗಳನ್ನು ಅಡಿಕೆ ತೋಟ ಆವರಿಸಿದೆ. ಬಾಳೆ ಬೆಳೆಯುವ ಪ್ರಮಾಣ ಶೇ 75ರಷ್ಟು ಕುಸಿದಿದೆ. ಕಳೆದೆರೆಡು ವರ್ಷಗಳಿಂದ ಕಾಡಾನೆ ಹಾವಳಿಯಿಂದ ಬಾಳೆ ಬೆಳೆಯುವುದನ್ನು ರೈತರು ಕೈಬಿಟ್ಟಿದ್ದಾರೆ ಎಂದು ಗಜಾನನ ಬಾಳೇಕಾಯಿ ಮಂಡಿಯ ಮಾಲೀಕ ಎಸ್.ಕೆ.ಸಂದೀಪ್ ಹೇಳಿದರು.