ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಕರ್ಣಾಟಕ ಬ್ಯಾಂಕ್‌ನಿಂದ ಶಾಲೆಗೆ ಬಸ್ ಕೊಡುಗೆ

Last Updated 8 ಅಕ್ಟೋಬರ್ 2022, 5:50 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸಿಂಹನಗದ್ದೆ ಬಸ್ತೊ ಮಠದ ಶ್ರೀ ಜ್ವಾಲಾಮಾಲಿನಿ ಎಜುಕೇಷನ್ ಸೊಸೈಟಿ ನಡೆಸುತ್ತಿರುವ ಜ್ವಾಲಾಮಾಲಿನಿ ದೇವಿ ಆಂಗ್ಲ ಮಾಧ್ಯಮ ಶಾಲೆಗೆ ಕರ್ಣಾಟಕ ಬ್ಯಾಂಕ್‌ ಸಿಎಸ್‌ಆರ್ ಯೋಜನೆಯಡಿ ₹ 21,84,500 ಮೌಲ್ಯದ ಬಸ್ ಕೊಡುಗೆಯಾಗಿ ನೀಡಿದೆ.

ಸೊಸೈಟಿ ಹಾಗೂ ಭಗವಾನ್ ಶ್ರೀ 1008 ಚಂದ್ರಪ್ರಭ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ನಿರ್ದೇಶಕ ಹಯವದನ ಉಪಾಧ್ಯ ಹಾಗೂ ನರಸಿಂಹರಾಜಪುರ ಶಾಖಾ ವ್ಯವಸ್ಥಾಪಕ ಸುದರ್ಶನ್ ಅವರು ಬಸ್‌ನ ಕೀ ಹಸ್ತಾಂತರಿಸಿದರು.

ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಬಸ್ ಕೊಡುಗೆ ನೀಡುವ ಮೂಲಕ ಮಲೆನಾಡು ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕರ್ಣಾಟಕ ಬ್ಯಾಂಕ್ ಅನುಕೂಲ ಮಾಡಿಕೊಟ್ಟಿದೆ ಎಂದರು.

ಹಯವದನ ಉಪಾಧ್ಯ, ಬ್ಯಾಂಕ್ ಆರ್ಥಿಕ ಚಟುವಟಿಕೆಗೆ ಮಾತ್ರ ಸೀಮಿತವಾಗಿರದೆ ಸಮಾಜ ಸೇವೆ ಮಾಡುತ್ತ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೃಷಿ ವಲಯಕ್ಕೂ ಸಹಾಯ ಮಾಡುತ್ತಿದೆ ಎಂದರು.

ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಜಿನರಾಜೇಂದ್ರ, ಶಿಕ್ಷಕರಾದ ಗಣಪತಿ ತಂತ್ರಿ, ಗುಣಪಾಲ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT