ಬುಧವಾರ, ನವೆಂಬರ್ 20, 2019
26 °C

ಚಾರ್ಮಾಡಿ ಘಾಟಿ: ಲಘುವಾಹನ ಸಂಚಾರಕ್ಕೆ ಮುಕ್ತ

Published:
Updated:

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗವನ್ನು ಇದೇ 15ರಿಂದ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಲಘುವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 

ದ್ವಿಚಕ್ರ ವಾಹನ, ಕಾರು, ಜೀಪು, ಎಲ್‌ಸಿವಿ ವ್ಯಾನು, ಅಂಬುಲೆನ್ಸ್‌ ವಾಹನ ಇತರ ಲಘುವಾಹನ ಸಂಚಾರಕ್ಕೆ ಅನುಮತಿಸಲಾಗಿದೆ. 
ಘಾಟಿ ಮಾರ್ಗದಲ್ಲಿ ಗಂಟೆಗೆ 20 ಕಿಲೊ ಮೀಟರ್‌ ವೇಗ ಮಿತಿಯಲ್ಲಿ ಸಂಚರಿಸಬೇಕು.

ಗುಡ್ಡದಮಣ್ಣು ಕುಸಿದು ಕೆಲವೆಡೆ ರಸ್ತೆ ಹಾನಿಯಾಗಿರುವುದರಿಂದ ಅತ್ಯಂತ ಜಾಗರೂಕವಾಗಿ ಚಾಲನೆ ಮಾಡಬೇಕು. ಚಾರ್ಮಾಡಿ ಭಾಗದದಲ್ಲಿ ಸ್ವಂತಿ (ಸೆಲ್ಫಿ), ಫೋಟೊಗ್ರಫಿ ನಿರ್ಬಂಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)