ಚಿಕ್ಕಮಗಳೂರು: ತಾಲ್ಲೂಕಿನ ಕೆಳಗಣೆ ಗ್ರಾಮದ ಬಳಿಯ ಎಸ್ಟೇಟ್‌ವೊಂದರಲ್ಲಿ ಉರುಳಿಗೆ ಸಿಲುಕಿ ಐದು ವರ್ಷದ ಗಂಡು ಚಿರತೆಯೊಂದು ಶನಿವಾರ ಮೃತಪಟ್ಟಿದೆ.

ಚಿರತೆ ಗಾಯಗೊಂಡು ನರಳಾಡುತ್ತಿದ್ದನ್ನು ನೋಡಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಡಿಎಫ್‌ಒ ಎನ್.ಎಚ್.ಜಗನ್ನಾಥ್, ಎಸಿಎಫ್ ಮುದ್ದಣ್ಣ, ಇತರ ಸಿಬ್ಬಂಧಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

‘ಚಿರತೆ ಉರುಳಿಗೆ ಸಿಲುಕಿ ಹೊಟ್ಟೆ ಭಾಗ ಸೀಳಿತ್ತು. ನಾವು ಹೋದಾಗ ಒದ್ದಾಡುತ್ತಿತ್ತು, ಸ್ವಲ್ಪ ಹೊತ್ತಿನಲ್ಲಿ ಮೃತಪಟ್ಟಿತ್ತು. ಅದು ಶುಕ್ರವಾರ ಉರುಳಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಎಸ್ಟೇಟ್ ಮಾಲೀಕನ ವಿರುದ್ಧ ಪ್ರಕಣ ದಾಖಲಿಸಲಾಗಿದೆ’ ಎಂದು ಎಸಿಎಫ್ ಮುದ್ದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಡಾ.ಸುಜಯ್ ಅವರು ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.