ಶನಿವಾರ, ಜನವರಿ 28, 2023
16 °C

ಕೆರೆಗೆ ಉರುಳಿದ ಕಾರು: ಚಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ತಾಲ್ಲೂಕಿನ ಬಾಳೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳುವಳ್ಳಿ ಸಮೀಪ ರಸ್ತೆ ಪಕ್ಕದಲ್ಲಿರುವ ಕೆರೆಗೆ ಕಾರು ಉರುಳಿಬಿದ್ದು, ಚಾಲಕ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಮಂಡ್ಯ ಜಿಲ್ಲೆ ಮದ್ದೂರಿನ ನಿವಾಸಿ ಪ್ರವೀಣ್ (42) ಮೃತಪಟ್ಟವರು. ಮದ್ದೂರಿನ ವಕೀಲರಾದ ಸ್ವಾಮಿ, ಪ್ರಶಾಂತ್, ಉಮೇಶ್ ಕಾರಿನಲ್ಲಿ ದಾವಣಗೆರೆಗೆ ವಿವಾಹಕ್ಕೆ ತೆರಳಿದ್ದು ವಿವಾಹ ಮುಗಿಸಿಕೊಂಡು ಎನ್.ಆರ್.ಪುರದ ಮೂಲಕ ಹೊರನಾಡು ದೇವಸ್ಥಾನಕ್ಕೆ ತೆರಳುವಾಗ ಮುಳುವಳ್ಳಿ ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣತಪ್ಪಿ ಕಾರು ಕೆರೆಗೆ ಉರುಳಿಬಿದ್ದಿದೆ. ಕಾರಿನಿಂದ ಹೊರ ಬಂದ ಮೂವರು ವಕೀಲರು ಈಜಿ ದಡ ಸೇರಿದರು. ಆದರೆ ವಾಹನ ಚಾಲನೆ ಮಾಡುತ್ತಿದ್ದ ಪ್ರವೀಣ್ ಸೀಟ್ ಬೆಲ್ಟ್ ತೆಗೆಯಲು ಸಾಧ್ಯವಾಗದಿದ್ದರಿಂದ ಕಾರಿನಿಂದ ಹೊರ ಬರಲು ಸಾಧ್ಯವಾಗದೆ ಮೃತಪಟ್ಟರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು