ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಚಿರತೆ ದಾಳಿ: 7 ಕುರಿ, 2 ಆಡು ಸಾವು

Published 2 ಮೇ 2024, 13:58 IST
Last Updated 2 ಮೇ 2024, 13:58 IST
ಅಕ್ಷರ ಗಾತ್ರ

ಕಡೂರು: ಯಗಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಏಳು ಕುರಿ, ಎರಡು ಆಡು ಮೃತಪಟ್ಟಿವೆ.

ಬುಧವಾರ ತಡರಾತ್ರಿ ಚಿರತೆ ಯಗಟಿಯ ಕೆಂಚಪ್ಪ ಮತ್ತು ರಾಜಪ್ಪ ಎಂಬುವವರ ಕೊಟ್ಟಿಗೆಗೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದೆ. ಗುರುವಾರ ಉಪವಲಯ ಅರಣ್ಯಾಧಿಕಾರಿ ಅಮೃತಾ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ನಷ್ಟದ ಬಗ್ಗೆ ಇಲಾಖೆಗೆ ವರದಿ ಕಳಿಸಲಾಗಿದೆ. ಚಿರತೆ ಓಡಾಡುತ್ತಿರುವ ಮಾಹಿತಿ ಮೇರೆಗೆ ಕುಕ್ಕಸಮುದ್ರ ಬಳಿ ಅರಣ್ಯ ಇಲಾಖೆ ಮೂಲಕ ಬೋನು ಇಡಲಾಗಿತ್ತು. ಇಂದು ಯಗಟಿ ಬಳಿಯೂ ಬೋನು ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಜಾಕ್ ನದಾಫ್ ತಿಳಿಸಿದ್ದಾರೆ.

ಬೇಸಿಗೆ ಸಮಯವಾದ್ದರಿಂದ ಚಿರತೆ ಮತ್ತಿತರ ವನ್ಯಜೀವಿಗಳು ನೀರು ಕುಡಿಯಲು ಗ್ರಾಮಗಳ ಒಳಭಾಗಕ್ಕೆ ಬರುವ ಸಾಧ್ಯತೆಗಳಿದ್ದು, ಗ್ರಾಮಸ್ಥರು ತಮ್ಮ ಜಾನುವಾರುಗಳ ಬಗ್ಗೆ ಜಾಗ್ರತೆ ವಹಿಸಬೇಕಿದೆ. ರಾತ್ರಿ ವೇಳೆ ಹೊಲ–ಗದ್ದೆಗಳಿಗೆ ಹೋಗುವ ರೈತರು ಒಂಟಿಯಾಗಿ ಹೋಗದೆ ಗುಂಪಾಗಿ ಹೋಗಬೇಕು. ಯಾವುದೇ ವನ್ಯಮೃಗಗಳು ಕಂಡರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT