ನರಸಿಂಹರಾಜಪುರ ತಾಲ್ಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು– ದಾವಣ ಮಾರ್ಗದ ಮಧ್ಯ ಹರಿಯುವ ಹಳ್ಳಕ್ಕೆ ಮರd ದಿಮ್ಮಿಯನ್ನು ಕಾಲುಸಂಕವಾಗಿ ಬಳಸಲಾಗುತ್ತಿದೆ
ಕೊಪ್ಪ ತಾಲ್ಲೂಕಿನ ಸಿದ್ದರಮಠ ಬಳಿ ನಿರ್ಮಾಣ ಹಂತದಲ್ಲಿರುವ ಕಿರು ಸೇತುವೆ
ಶೃಂಗೇರಿ ತಾಲ್ಲೂಕಿನ ನೆಮ್ಮಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವುಂಟುನಲ್ಲಿ ಇರುವ ಕಾಲುಸಂಕ
ಕಳಸದಲ್ಲಿ ನಿರ್ವಹಣೆಯಾಗದಿರುವ ತೂಗು ಸೇತುವೆ
ತೂಗು ಸೇತುವೆಗೆ ನಿರ್ವಹಣೆ ಕೊರತೆ
ಕಳಸ: ತಾಲ್ಲೂಕಿನ ಕೆಲವು ತೂಗುಸೇತುವೆ 10 ವರ್ಷದ ಹಿಂದೆ ನಿರ್ಮಾಣ ಆಗಿವೆ. ಆದರೆ ನಿರ್ವಹಣೆ ಕೊರತೆಯಿಂದ ಅವು ಶಿಥಿಲಗೊಂಡಿವೆ. ಕಲ್ಲುಗ್ಗೋಡು, ಅನಾಮಗೆ, ವಸಿಷ್ಠ ಆಶ್ರಮ ಬಳಿ ಇರುವ ಸೇತುವೆ ಬಳಸುವ ನೂರಾರು ಗ್ರಾಮಸ್ಥರಿಗೆ ಈ ತೂಗು ಸೇತುವೆ ಬಗ್ಗೆ ಚಿಂತೆಯಾಗಿದೆ. ಜಿಲ್ಲಾ ಪಂಚಾಯಿತಿ ಈ ಸೇತುವೆಗಳ ನಿರ್ವಹಣೆ ಬಗ್ಗೆ ಸರ್ವೆ ನಡೆಸಿದೆ. ಆದರೆ, ಈವರೆಗೂ ಬಣ್ಣ ಬಳಿಯುವ ಹಾಗೂ ದುರಸ್ತಿ ಕಾಮಗಾರಿ ಶುರು ಮಾಡಿಲ್ಲ. ಶಾಲಾ ಮಕ್ಕಳು, ಕೃಷಿಕರಿಗೆ ಬೇರೆ ಸಂಪರ್ಕ ವ್ಯವಸ್ಥೆ ಇಲ್ಲದೆ ಈ ತೂಗು ಸೇತುವೆ ಮೇಲೆಯೇ ಸಂಚರಿಸುತ್ತಿದ್ದಾರೆ.