ಪತ್ರಿಕಾ ಹೇಳಿಕೆ ನೀಡಿರುವ ಅವರು ತರುವೆ ಗ್ರಾಮ ಪಂಚಾಯಿತಿಯಲ್ಲಿ ಖಾಯಂ ಪಿಡಿಒ ಇಲ್ಲದೆ ಅತ್ತಿಗೆರೆ, ಬಿನ್ನಡಿ, ದೇವನಗೂಲ್, ಅಜಾದ್ ನಗರ, ರಾಮನಗರ ಮತ್ತಿತರ ಗ್ರಾಮದ ಕೆಲಸಗಳು ಆಗುತ್ತಿಲ್ಲ. ಇಲ್ಲಿದ್ದ ಪಿಡಿಒ ವರ್ಷದ ಹಿಂದೆ ವರ್ಗ ಆಗಿರುವುದರಿಂದ ಬೇರೆ ಪಂಚಾಯಿತಿಗಳ ಪಿಡಿಒ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ. ಅವರಿಗೆ ಎರಡೆರಡು ಗ್ರಾಮ ಪಂಚಾಯಿತಿ ಕೆಲಸ ನಿಭಾಯಿಸುವುದು ಕಷ್ಟವಾಗಿದೆ. ಸಂಬಂಧಪಟ್ಟವರು ತರುವೆ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ನೇಮಕ ಮಾಡದೇ ಇದ್ದರೆ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.