ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಜಾತ್ರೆ: ಪೂರ್ಣಗೊಂಡ ಸಿದ್ಧತೆ

ಶ್ರೀಸುಬ್ರಹ್ಮಣ್ಯ ನಾಗಸನ್ನಿಧಿ ಕ್ಷೇತ್ರದಲ್ಲಿ ಉತ್ಸವಕ್ಕೆ ಎರಡೇ ದಿನ ಬಾಕಿ
Last Updated 9 ಡಿಸೆಂಬರ್ 2018, 16:59 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜಾತ್ರೆಗೆ ಆರಂಭಕ್ಕೆ ಎರಡೇ ದಿನ ಬಾಕಿ ಇದೆ. ಜಾತ್ರೆಗೆ ವಿಶೇಷ ರಂಗು ತುಂಬಲು ತಯಾರಿ ನಡೆದಿದೆ.

ಶ್ರೀಕ್ಷೇತ್ರವನ್ನು ಸ್ವಚ್ಛಗೊಸಲಾಗಿದೆ. ದೇವಸ್ಥಾನ, ಕಟ್ಟಡಗಳು, ಅಂಗಡಿ ಮುಂಗಟ್ಟುಗಳು, ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ಬೀದಿಮಡೆಸ್ನಾನ ಸೇವೆ ಆರಂಭಗೊಂಡಿದೆ. ಕುಮಾ ರಧಾರದಿಂದ ಕುಲ್ಕುಂದವರೆಗೆ ವಿದ್ಯುತ್ ದೀಪ ಅಳವಡಿಸಲಾಗಿದೆ. ರಸ್ತೆಬದಿ ಅಲ್ಲಲ್ಲಿ ನಾಮಫಲಕ ಹಾಕಲಾಗಿದೆ.

ಜಾತ್ರೆ ಸಮಯ ಒತ್ತಡ ನಿಯಂತ್ರಣಕ್ಕೆ ಪ್ರವೇಶ ಗೋಪುರ, ಹೊರಾಂಗಣ, ಆದಿ ಸುಬ್ರಹ್ಮಣ್ಯ ಭೋಜನಶಾಲೆ ಇತ್ಯಾದಿ ಕಡೆಗಳಲ್ಲಿ ಸ್ವಯಂ ಸೇವಕರು, ಪೊಲೀಸ್ , ಗೃಹರಕ್ಷಕದಳ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸಲಾಗಿದೆ.

ಪಂಚಮಿ ದಿನ ಹಾಗೂ ಅವಭೃತ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಅನ್ನಪ್ರಸಾದ ಭೋಜನಕ್ಕೆ ದೇಗುಲದ ಭೋಜನ ಶಾಲೆ, ಅಂಗಡಿಗುಡ್ಡೆಯಲ್ಲಿ ವಿಶಾಲ ಚಪ್ಪರ ವ್ಯವಸ್ಥೆ ಇದೆ. ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವಾರ್ಥಿ ಭೋಜನ ಶಾಲೆಯಲ್ಲಿ ಉಪಾಹಾರ ವ್ಯವಸ್ಥೆ ಇದೆ.

ದೇಗುಲದ ಒಳಾಂಗಣ, ಹೊರಾಂ ಗಣ, ಸ್ನಾನಘಟ್ಟ, ಭೋಜನ ಶಾಲೆ ಆದಿಸುಬ್ರಹ್ಮಣ್ಯ, ರಥಬೀದಿ, ಪಾರ್ಕಿಂಗ್ ಸ್ಥಳ, ಇತ್ಯಾದಿ ಕಡೆಗಳಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜನೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬ್ಯಾರಿಕೇಡ್ , ಎಲ್ಇಡಿ ಪರದೆ ಅಳವಡಿಸುವುದು.

ಪುತ್ತೂರು ಗುಂಡ್ಯ ಹಾಗೂ ಉಪ್ಪಿ ನಂಗಡಿ ಕಡೆಯಿಂದ ಬರುವ ಖಾಸಗಿ ವಾಹನಗಳಿಗೆ ಪದವಿಪೂರ್ವ ಕಾಲೇಜು, ಎಸ್ಎಸ್ಪಿಯು ಕಾಲೇಜು ಮೈದಾನ, ಬಸ್ಗಳಿಗೆ ಬಿಲದ್ವಾರ ಎದುರು ನಿಲುಗಡೆ. ಹರಕೆ ರಥೋತ್ಸವ, ಸೇವಾರ್ಥಿಗಳು, ವಿವಿಧ ಇಲಾಖೆ ವಾಹನ, ಗಣ್ಯರ ವಾಹನಗಳಿಗೆ ಅರಣ್ಯ ಇಲಾಖೆ ಕಚೇರಿ ಹಿಂಭಾಗದಲ್ಲಿ ನಿಲುಗಡೆ ವ್ಯವಸ್ಥೆ ಇದೆ. ಸುಳ್ಯ ಕಡೆಯಿಂದ ಬರುವ ಸರಕಾರಿ ಹಾಗೂ ಖಾಸಗಿ ಬಸ್‌ಗಳಿಗೆ ಸವಾರಿ ಮಂಟಪ ಬಳಿಯ ನಿಲುಗಡೆಗೆ ಸ್ಥಳ, ಇತರೆ ವಾಹನಗಳಿಗೆ ಕನ್ನಡಿ ಹೊಳೆ ಸೇತುವೆ ಬಳಿ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ವದ್ವಿಚಕ್ರ ವಾಹನಗಳಿಗೆ ಪೊಲೀಸ್ ಗ್ರೌಂಡ್, ಲಘುವಾಹನಗಳಿಗೆ ವಲ್ಲೀಶ ಸಭಾಭವನ ಪಕ್ಕದ ಖಾಲಿ ಸ್ಥಳ, ಹೆಲಿಪ್ಯಾಡ್ ಸ್ಥಳದಲ್ಲಿ ನಾಲ್ಕು ಚಕ್ರಗಳ ವಾಹನ ನಿಲುಗಡೆ. ಈ ಕಡೆಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆ ಬದಿಯಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸು ವುದು ಮಾಡದಂತೆ ಸೂಚನೆಯಿದೆ. ಹೋಟೆಲ್‌ಗಳಲ್ಲಿ ಬಿಸಿ ನೀರು ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ವಿಶೇಷ ತಂಡ ರಚನೆ
ಶುಚಿತ್ವ, ಹೆಚ್ಚುವರಿ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಚೌತಿ, ಪಂಚಮಿ, ಷಷ್ಠಿ ಈ ಮೂರು ದಿನ ಮದ್ಯ ವ್ಯವಹಾರ ನಿಷೇಧಿಸಿ ಮದ್ಯದಂಗಡಿ, ಬಾರ್ ಮುಚ್ಚುವುದು. ಮಾಂಸ ಮಾರಾಟ, ಪ್ಲಾಸ್ಟಿಕ್ ಬಳಕೆ, ತಂಬಾಕು ಪದಾರ್ಥಗಳ ನಿಷೇಧ ಮಾಡಲಾಗಿದೆ. ಇದಕ್ಕೆ ವಿಶೇಷ ತಪಾಸಣಾ ತಂಡ ರಚಿಸಲಾಗಿದೆ. ಲಗೇಜ್ ಕೊಠಡಿ, ಧ್ವನಿವರ್ಧಕ, ಪಾರ್ಕಿಂಗ್, ಡ್ರೆಸಿಂಗ್, ಬೆಳಕು, ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ . ಕೃಷಿಮೇಳ ಇದೆ. ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

*
ಜಾತ್ರೆ ವೇಳೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
-ಗೋಪಾಲ್ ಪಿಎಸ್‌ಐ, ಸುಬ್ರಹ್ಮಣ್ಯ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT