ಕಳಸ (ಚಿಕ್ಕಮಗಳೂರು): ಬ್ರೆಜಿಲ್ನಲ್ಲಿ ಕಾಫಿ ಕೊಯ್ಲು ಶುರುವಾದ ನಂತರ ಮಾರುಕಟ್ಟೆಗೆ ಕಾಫಿ ಆವಕ ಹೆಚ್ಚಾಗಿದ್ದು, ಧಾರಣೆ ದಿನೇ ದಿನೇ ಕುಸಿಯುತ್ತಿದೆ.

ಶುಕ್ರವಾರ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಟನ್ ಒಂದಕ್ಕೆ 3,170 ಡಾಲರ್ ಬೆಲೆ ಇತ್ತು. ಇದು 14 ತಿಂಗಳ ಕನಿಷ್ಠ. ಅರೇಬಿಕಾ ಕಾಫಿ ಪೌಂಡ್ ಒಂದಕ್ಕೆ 286 ಸೆಂಟ್ಸ್ ಮಟ್ಟಕ್ಕೆ ಕುಸಿದಿದೆ. ಇದು 8 ತಿಂಗಳ ಕನಿಷ್ಠ. ದೇಶಿ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಶೇ 30ರಷ್ಟು ಕುಸಿದಿದೆ.

ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾಫಿ ಬೆಳೆಯುವ ಬ್ರೆಜಿಲ್ ದೇಶದಲ್ಲಿ ಕಾಫಿ ಕೊಯ್ಲು ಚುರುಕಾಗಿದೆ. ಶೇ 70ರಷ್ಟು ಕೊಯ್ಲು ಮುಗಿದಿದೆ.

ವಿಯೆಟ್ನಾಂ ದೇಶದಲ್ಲಿ ಈ ಸಾಲಿನ ರೊಬಸ್ಟಾ ಬೆಳೆ ಪ್ರಮಾಣ ಹೆಚ್ಚಬಹುದು ಎಂಬ ನಿರೀಕ್ಷೆಯೂ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಬೆಲೆ ಇಳಿಕೆಗೆ ಕಾರಣವಾಗಿದೆ.

ಯುಎಸ್ಡಿಎ ಸಂಸ್ಥೆ ತನ್ನ 2025- 26ನೇ ಸಾಲಿನ ಕಾಫಿ ಫಸಲಿನ ಅಂದಾಜನ್ನು ಪ್ರಕಟಿಸಿದೆ. ಅದರ ಪ್ರಕಾರ ಜಾಗತಿಕ ಕಾಫಿ ಉತ್ಪಾದನೆ ಮುಂದಿನ ಸಾಲಿಗೆ ಶೇ 2.5ರಷ್ಟು ಹೆಚ್ಚಿ 1.78 ಕೋಟಿ ಚೀಲ ತಲುಪಬಹುದು. ಈ ಪೈಕಿ ಅರೇಬಿಕಾ ಶೇ 1.7 ಕಡಿಮೆಯಾದರೆ ರೊಬಸ್ಟಾ ಶೇ 7ರಷ್ಟು ಹೆಚ್ಚಬಹುದು ಎಂದು ಆ ಸಂಸ್ಥೆ ಅಂದಾಜಿಸಿದೆ.

ಕುಸಿಯುತ್ತಿರುವ ಕಾಫಿ ಬೆಲೆಯ ಬಗ್ಗೆ ಬೆಳೆಗಾರ ಮತ್ತು ಮಾರುಕಟ್ಟೆ ವಿಶ್ಲೇಷಕ ಗೌತಹಳ್ಳಿ ಕರಣ್, ‘ಜಾಗತಿಕ ಅರೇಬಿಕಾ ಫಸಲಿನ ಆಧಾರದ ಮೇಲೆ ರೊಬಸ್ಟಾ ಬೆಲೆ ಏರುಪೇರು ಆಗಬಹುದು. ಅರೇಬಿಕಾ ಫಸಲು ನಿರೀಕ್ಷೆಗಿಂತ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ರೊಬಸ್ಟಾ ಧಾರಣೆ ಹೆಚ್ಚಬಹುದು’ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಕಾಫಿ ಉದ್ಯಮದ ಜಾಗತಿಕ ಸಂಸ್ಥೆ ವೋಲ್ಕೆಫೇ ಕೂಡ 2025- 26ನೇ ಸಾಲಿನಲ್ಲಿ ಅರೇಬಿಕಾ ಕಾಫಿ ಉತ್ಪಾದನೆ 90 ಲಕ್ಷ ಚೀಲದಷ್ಟು ಕಡಿಮೆ ಆಗಬಹುದು ಎಂದು ಅಂದಾಜಿಸಿದೆ.

ಇತ್ತ ಬಹುತೇಕ ಬೆಳೆಗಾರರು ಗರಿಷ್ಠ ಧಾರಣೆಯ ನಿರೀಕ್ಷೆಯಿಂದ ಕಾಫಿ ದಾಸ್ತಾನು ಮಾಡಿದ್ದರು. ಇದೀಗ ಶೇ 30ರಷ್ಟು ದರ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಈ ಬಾರಿ ಫಸಲು ಕೂಡ ನೆಲಕಚ್ಚುತ್ತಿದೆ. ಇದು ಕೂಡ ಬೆಳೆಗಾರರಿಗೆ ತಲೆ ನೋವು ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.