ಕಳಸ: ಕಾಫಿ ಕೊಯ್ಲು ಆರಂಭ ಆಗುತ್ತಿದ್ದಂತೆ, ಧಾರಣೆ ಕುಸಿಯುತ್ತಿರುವುದು ಬೆಳೆಗಾರರಿಗೆ ಬೇಸರ ಮೂಡಿಸಿದೆ. ಜನವರಿಯಿಂದ ಗರಿಷ್ಠ ಮಟ್ಟದಲ್ಲಿದ್ದ ಕಾಫಿ ಧಾರಣೆ ಈಗ 2 ವರ್ಷದ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಧಾರಣೆ ಶುಕ್ರವಾರ ಟನ್ಗೆ 3,669 ಡಾಲರ್ಗೆ ಕುಸಿದಿದೆ. ಸ್ಥಳೀಯವಾಗಿ 1ಕೆ.ಜಿ ಕಾಫಿ ಬೇಳೆ ಬೆಲೆ ₹350ಕ್ಕೆ ಇಳಿದಿದೆ. ಮಾರ್ಚ್ನಲ್ಲಿ ಕೆ.ಜಿಗೆ ₹500 ರಷ್ಟು ಇತ್ತು.

ಬೆಲೆ ಏರಿಕೆಯ ನಿರೀಕ್ಷೆಯಿಂದ ರೈತರು ಕಳೆದ ವರ್ಷದ ಫಸಲನ್ನು ದಾಸ್ತಾನು ಮಾಡಿದ್ದರು. ‘ಕಳೆದ ವರ್ಷ ಬೇಗ ಕಾಫಿ ಮಾರಾಟ ಮಾಡಿ ನಷ್ಟ ಅನುಭವಿಸಿದ್ದೆವು. ಈ ವರ್ಷ ತೋಟಕ್ಕೆ ಬಹಳಷ್ಟು ಖರ್ಚು ಮಾಡಿದ್ದೆವು. ಆದರೆ, ಕೊಯ್ಲಿನ ವೇಳೆಗೆ ದರ ಇಳಿದಿರುವುದು ಬೇಸರ ತಂದಿದೆ’ ಎಂದು ಬೆಳೆಗಾರ ನೂಜಿ ಪೂರ್ಣೇಶ್ ಹೇಳುತ್ತಾರೆ.

ಬ್ರೆಜಿಲ್ನಲ್ಲಿ ಅರೇಬಿಕಾ ಕಾಫಿ ಫಸಲು ಉತ್ತಮವಾಗಿದೆ. ಅದು ಧಾರಣೆ ಇಳಿಯಲು ಕಾರಣ. ವಿಯೆಟ್ನಾಂನಲ್ಲಿ ರೊಬಸ್ಟಾ ಬೆಳೆ ಹೆಚ್ಚುತ್ತಿದೆ. ಈ ವರ್ಷ ಅಲ್ಲಿ 2.9 ಕೋಟಿ ಚೀಲಗಳಷ್ಟು ಕಫಿ ಬೆಳೆಯಲಾಗಿದ್ದು, ಇದು 4 ವರ್ಷದ ಗರಿಷ್ಠ ಮಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಜಾಗತಿಕವಾಗಿ ಕಾಫಿ ಫಸಲು ಈ ವರ್ಷ ಶೇ 2ರಷ್ಟು ಏರಬಹುದು. ಅರೇಬಿಕಾ ಕಾಫಿ ಫಸಲು ಶೇ 5ರಷ್ಟು ರೊಬಸ್ಟಾ ಇಳುವರಿ ಶೇ 11ರಷ್ಟು ಏರಬಹುದು’ ಎಂದು ಅಮೆರಿಕದ ವಿದೇಶಿ ಕೃಷಿ ಸೇವಾ ಸಂಸ್ಥೆ ಅಂದಾಜಿಸಿದೆ.

‘ಜಾಗತಿಕಕ ಮಟ್ಟದಲ್ಲಿ ಕಾಫಿ ಉತ್ಪಾದನೆ ತೀರಾ ಹೆಚ್ಚಾಗಿಲ್ಲ. ಆದ್ದರಿಂದ ದರ ಇನ್ನಷ್ಟು ಕುಸಿಯಲಾರದು’ ಎಂದು ಮಾರುಕಟ್ಟೆಯ ತಜ್ಞರ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಬೆಲೆ ಕುಸಿಯುವ ಭೀತಿಯಿಂದ ಕೆಲ ಬೆಳೆಗಾರರು ಕಾಫಿ ಒಣಗಿದ ಕೂಡಲೇ ಮಾರುತ್ತಿದ್ದಾರೆ. ಕೆಲವರು ಮಾರುಕಟ್ಟೆ ಚೇತರಿಸಿದ ನಂತರ ಮಾರಲು ಉದ್ದೇಶಿಸಿ ದಾಸ್ತಾನು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.