ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿ ಹಂಚಿದ್ದ ಕುಕ್ಕರ್‌ ಸಿಡಿದು ಹಾರಿಬಿದ್ದ ಮುಚ್ಚಳ!

Last Updated 5 ಏಪ್ರಿಲ್ 2023, 6:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕೊಪ್ಪ ತಾಲ್ಲೂಕಿನ ಅಗಲಿ ಗ್ರಾಮದಲ್ಲಿ ಆಟೊ ರಿಕ್ಷಾ ಚಾಲಕ ದೇವರಾಜ್‌ ಅವರ ಮನೆಯಲ್ಲಿ ಕುಕ್ಕರ್‌ ಸಿಡಿದು ಮುಚ್ಚಳ ಹಾರಿದೆ.

ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಈಚೆಗೆ ಗ್ರಾಮದಲ್ಲಿ ಕುಕ್ಕರ್‌ ಹಂಚಿದ್ದರು’ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ‘ಆಹಾರ ಬೇಯಿಸಲು ಸ್ಟೌ ಮೇಲೆ ಇಟ್ಟಿದ್ದ ಕುಕ್ಕರ್‌ ಸಿಡಿದು, ಮುಚ್ಚಳ ಹಾರಿತು. ಜೋರಾಗಿ ಶಬ್ಧವಾಯಿತು. ಯಾರಿಗೂ ಯಾವುದೇ ಅಪಾಯವಾಗಿಲ್ಲ’ ಎಂದು ಕುಟುಂಬದವರು ‘ಪ್ರಜಾವಾಣಿ’ಗೆ ತಿಳಿಸಿದರು.

ತೋಟದಲ್ಲಿ 65 ಕುಕ್ಕರ್ ಪತ್ತೆ ಜಯಪುರ(ಬಾಳೆಹೊನ್ನೂರು): ಇನ್ನೊಂದು ಪ್ರಕರಣದಲ್ಲಿ, ಸಮೀಪದ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಟ್ಟೆಕೊಪ್ಪದ ತೋಟದಲ್ಲಿ 65 ಕುಕ್ಕರ್‌ಗಳನ್ನು ಜಯಪುರ ಪೊಲೀಸರು ಪತ್ತೆ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಹಂಚಿಕೆ ಮಾಡಲು ತಂದಿದ್ದರೆನ್ನಲಾದ ಆರೋಪದ ಅಡಿಯಲ್ಲಿ ಪೊಲೀಸರು ಸುಮಾರು ₹90 ಸಾವಿರ ಮೌಲ್ಯದ ಈ ಕುಕ್ಕರ್‌ಗಳನ್ನು ವಶಪಡಿಸಿಕೊಂಡು, ಸಂಜ್ಞಾರಹಿತ ಅಪರಾಧ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT