ಮಂಗಳವಾರ, ಜೂನ್ 28, 2022
26 °C
ಕೋವಿಡ್ ಆರೈಕೆ ಕೇಂದ್ರಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ

ಶೃಂಗೇರಿ: ಬೇಗಾರಿನಲ್ಲಿ 90 ಮಂದಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ‘ಬೇಗಾರು ವಸತಿ ಶಾಲೆಯಲ್ಲಿ 90 ಮಂದಿ ಸೋಂಕಿತರಿಗೆ ಅವಕಾಶ ಇದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೆ ನೆಮ್ಮಾರು ವಸತಿ ಶಾಲೆಯಲ್ಲಿ ಆರೈಕೆಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ  ಹೇಳಿದರು.

ಶೃಂಗೇರಿಯ ಬೇಗಾರಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳೊಂದಿಗೆ ಅವರು ಮಾತನಾಡಿದರು. ‘ಕೋವಿಡ್ ಸೋಂಕು ಗುಣವಾಗುವಲ್ಲಿ ಔಷಧಿಯ ಪಾತ್ರ ಶೇ 30 ಇದ್ದರೆ, ಸೋಂಕಿತರ ಆತ್ಮಸ್ಥೈರ್ಯದ ಪಾಲು ಶೇ 70 ಇರುತ್ತದೆ. ನೀವೆಲ್ಲರೂ ಧೈರ್ಯದಿಂದ ಇದ್ದು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿದಲ್ಲಿ ಶೀಘ್ರದಲ್ಲಿ ಗುಣಮುಖರಾಗಿ ಮನೆಗೆ ಸೇರುತ್ತೀರಿ’ ಎಂದು ಧೈರ್ಯತುಂಬಿದರು.

‘ಹದಿನಾಲ್ಕು ದಿನಗಳ ಕಾಲ ಧೈರ್ಯದಿಂದ ಇಲ್ಲಿದ್ದು, ಗುಣಮುಖರಾಗಿ ಹೊರ ಹೋದಾಗ ಸೋಂಕು ಹರಡುವುದು ತಪ್ಪುತ್ತದೆ. ಇದರಿಂದ ಸೋಂಕು ಪ್ರಸರಣ ತಡೆಗಟ್ಟಲು ಸಾಧ್ಯವಾಗಿ ನಿಮ್ಮ ಗ್ರಾಮ, ಊರು ಎಲ್ಲವೂ ಆರೋಗ್ಯ ಪೂರ್ಣವಾಗುವುದು. ಇಲ್ಲಿ ನಿಮಗೆ ಎಲ್ಲಾ ಸೌಕರ್ಯಗಳನ್ನೂ ಮಾಡಲಾಗಿದೆ. ಕೊರತೆ ಏನಾದರೂ ಕಂಡಲ್ಲಿ ನನ್ನನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಆರೈಕೆ ಕೇಂದ್ರದಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು. ಎಂಜಿನಿಯರ್ ವಚನ್ ಲಕ್ಷ್ಮಣಗೌಡ ಅವರ ನೇತೃತ್ವದಲ್ಲಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದ ಆಮ್ಲಜನಕ ಸಾಂದ್ರಕ ಮತ್ತು ಔಷಧಿಗಳು, ಚುಚ್ಚುಮದ್ದು, ಎನ್-95 ಮತ್ತು ಸರ್ಜಿಕಲ್ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್, ಸ್ಯಾನಿಟೈಸರ್‌ ಅನ್ನು ಎಲ್ಲಾ ಪ್ರಾಥಮಿಕ ಕೇಂದ್ರ, ಆರೈಕೆ ಕೇಂದ್ರಕ್ಕೆ ಶಾಸಕರು ಹಸ್ತಾಂತರಿಸಿದರು.

ಡಾ.ಟಿ.ಡಿ. ಮಂಜುನಾಥ್, ಡಿವೈಎಸ್ಪಿ ರಾಜು, ಪ್ರಭಾರ ತಹಶೀಲ್ದಾರ್ ಪರಮೇಶ್, ಇನ್‍ಸ್ಪೆಕ್ಟರ್ ರವಿ ಬಿ.ಎಸ್. ಬೇಗಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ, ಸದಸ್ಯ ಲಕ್ಷ್ಮೀಶ ಅಣ್ಕುಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು