ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಮಾಳಿಗನಾಡು ಸಮೀಪದ ಕಾಳಿಕಟ್ಟೆ ಗುಡ್ಡದ ಗವಿಯಲ್ಲಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಗವಿ ಬಳಿ ಇದ್ದ ಒಬ್ಬರು ಗಾಯಗೊಂಡಿದ್ದಾರೆ.

ಆನೆಗುಂಡಿ ಎಸ್ಟೇಟ್‌ನ ಕಾರ್ಮಿಕರಾದ ವಿಜಯ್ (28) ಹಾಗೂ ಶರತ್ (25) ಮೃತಪಟ್ಟವರು. ಇಬ್ಬರೂ ತಮಿಳುನಾಡಿವರು. ಗಾಯಾಳು ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತದೇಹಗಳನ್ನು ಗುಹೆಯಿಂದ ಹೊರಕ್ಕೆ ತೆಗೆದು, ಚಿಕ್ಕಮಗಳೂರಿನ ಶವಾಗಾರಕ್ಕೆ ಸಾಗಿಸಲಾಗಿದೆ. ‘ಗುಹೆ ಭಾಗದಲ್ಲಿ
ಜೇನುಕಟ್ಟಿದೆ ಎಂದು ಕಾರ್ಮಿಕರು ಬೆಂಕಿ ಹಾಕಿ ಒಳಗೆ ಹೋಗಿ ಸಿಲುಕಿಕೊಂಡು ಹೊರಗೆ ಬರಲಾಗದೆ ಉಸಿರುಗಟ್ಟಿ ಮೃತಪಟ್ಟಿರಬಹುದು. ಸೋಮವಾರ ಬೆಳಿಗ್ಗೆ ಘಟನೆ ನಡೆದಿದೆ’ ಎಂದು ಬಾಳೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ಶಿಕಾರಿಗೆ ತೆರಳಿ ಸಾವು: ಾರ್ಮಿಕರು ಮುಳ್ಳಹಂದಿ ಶಿಕಾರಿಗೆ ಹೋಗಿ, ಸುರಂಗದೊಳಗೆ ಸಿಲುಕಿಕೊಂಡು ಉಸಿರು ಕಟ್ಟಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.