ಆಲ್ದೂರು: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಂಗಳವಾರ ದಿಢೀರ್ ಭೇಟಿ ನೀಡಿದರು.

ಆಸ್ಪತ್ರೆಯ ಮುಂಭಾಗದಲ್ಲಿ ಸಿದ್ದಗೊಂಡಿರುವ ಚರಂಡಿ ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ, ಮಳೆಯ ನೀರು ಒಳಬರದಂತೆ ಚರಂಡಿ ಲೈನ್ ಎಲ್ಲಿಯವರೆಗೂ ತೆರಳುತ್ತದೆಯೋ ಅಲ್ಲಿಯವರೆಗೂ ಸ್ವಚ್ಛಗೊಳಿಸಿ ಸರಿಪಡಿಸಬೇಕು ಎಂದು ಸೂಚಿಸಿದರು

ಆಸ್ಪತ್ರೆಯ ಆವರಣದಿಂದ ಹಿಂಭಾಗದವರೆಗೂ ಇರುವ ಎಲ್ ಆಕಾರದ ಜಾಗದಲ್ಲಿ ಇಂಟರ್ಲಾಕ್ ವ್ಯವಸ್ಥೆಯನ್ನು ಅಳವಡಿಸಬೇಕು. ಈ ಹಿಂದೆ ಹಳೆಯ ಸಂಪ್ ಗುಂಡಿಯ ಬಳಿ ಮಣ್ಣು ಕುಸಿತದಿಂದ ಉಂಟಾಗಿದ್ದ ದೊಡ್ಡ ರಂಧ್ರಗಳಿಗೆ ಮೊದಲು ಮಣ್ಣು ತುಂಬಿಸಿ ಶೀಘ್ರ ದುರಸ್ತಿ ಮಾಡುವಂತೆ ಜಿಲ್ಲಾ ಪಂಚಾಯತ್ ರಾಜ್ ಕಾರ್ಯಪಾಲಕ ಎಂಜಿನಿಯರ್ ಮತ್ತು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಆರೋಗ್ಯ ಕೇಂದ್ರದ ವೈದ್ಯರಾದ ನಾಗಚೈತನ್ಯ, ಪಿಡಬ್ಲ್ಯೂಡಿ ಗುತ್ತಿಗೆದಾರ ಎ.ಯು.ಇಬ್ರಾಹಿಂ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.