ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘ ಪರಿವಾರದವರು ಪ್ರಜ್ವಲ್‌ಗೆ ಮತ ಹಾಕಬೇಡಿ; ಸತೀಶ್ ನಾಯ್ಕ

Published 18 ಏಪ್ರಿಲ್ 2024, 12:40 IST
Last Updated 18 ಏಪ್ರಿಲ್ 2024, 12:40 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಡೂರು: ‘ದೇಶ ಭಕ್ತಿಯುಳ್ಳ ಸಂಘ ಪರಿವಾರದವರು ಆತ್ಮ ಗೌರವವಿದ್ದರೆ ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಬಾರದು’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ ಹೇಳಿದರು.

ಕಡೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಡುತ್ತೇನೆ ಎಂದಿದ್ದರು. ಅದೇ ರೀತಿ ಪ್ರಜ್ವಲ್ ಸಹ ಆರ್‌ಎಸ್‌ಎಸ್‌ ಬಗ್ಗೆ ತಾತ್ಸಾರದಿಂದ ಮಾತನಾಡಿದ್ದರು. ಈಗ ಅವರೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ದೇಶಭಕ್ತ ಸಂಘಟನೆಯವರೇ ಪ್ರಜ್ವಲ್ ಪರ ಪ್ರಚಾರ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಂಘ ಪರಿವಾರದವರು ಆತ್ಮಾಭಿಮಾನವಿದ್ದರೆ ಪ್ರಜ್ವಲ್ ಅವರಿಗೆ ಮತ ಚಲಾಯಿಸಬಾರದು’ ಎಂದು ಆಗ್ರಹಿಸಿದರು.

ಎರಡು ವರ್ಷದ ಹಿಂದೆ ಅಫಘಾತದಲ್ಲಿ ನಿಧನರಾದ ಸೋಮನಹಳ್ಳಿ ತಾಂಡ್ಯದ ಬಂಜಾರ ಸಮುದಾಯದ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಕುಟುಂಬಕ್ಕೆ ₹2 ಸಹಾಯಧನ ನೀಡುವುದಾಗಿ ‌ಹೇಳಿ ₹25 ಸಾವಿರ ನೀಡಿದರು. ಉಳಿದ ಹಣವನ್ನು ಕಳಿಸಿಕೊಡುವುದಾಗಿ ಹೇಳಿ ಇಲ್ಲಿಯವರೆಗೂ ನೀಡಲಿಲ್ಲ. ಹೀಗೆ ಸುಳ್ಳು ಹೇಳುವ ಸಂಸದರು ನಮಗೆ ಬೇಕಿಲ್ಲ. ಬಂಜಾರ ಸಮುದಾಯದರು ಬಹುತೇಕ ಕಾಂಗ್ರೆಸ್ ಜೊತೆ ಇದ್ದು, ಶ್ರೇಯಸ್ ಪಟೇಲ್ ಅವರಿಗೆ ಮತ ನೀಡಲಿದ್ದಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ಸೋಮಶೇಖರ್, ದಕ್ಷಿಣಾಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT