ಮೂಡಿಗೆರೆ: ತಾಲ್ಲೂಕಿನ ಬಿ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಕ್ಕಳ್ಳಿ ಗ್ರಾಮದ ಬಳಿ ವಿದ್ಯುತ್ ಕಂಬ ತುಂಡಾಗಿ ಆರು ದಿನ ಕಳೆದರೂ ದುರಸ್ತಿಯಾಗದ ಕಾರಣ, ಹೊಕ್ಕಳ್ಳಿ, ಪಾಂಡವರತಟ್ಟ, ಮಾವಿನಗೋಡು, ದೊಡ್ಡಳ್ಳ, ತಳವಾರ ಸೇರಿದಂತೆ ಹಲವು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.

'ಆರು ದಿನಗಳ ಹಿಂದೆ ಗಾಳಿ ಮಳೆಗೆ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬ ತುಂಡಾಗಿತ್ತು. ರಸ್ತೆಯ ಮೇಲೆ ಬಾಗಿದ್ದ ವಿದ್ಯುತ್ ತಂತಿಯನ್ನು ಮರಕ್ಕೆ ಕಟ್ಟಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಆರು ದಿನ ಕಳೆದರೂ ಕಂಬ ಬದಲಾವಣೆ ಮಾಡದ ಕಾರಣದಿಂದ ಗ್ರಾಮಸ್ಥರು ತೊಂದರೆ ಎದುರಿಸುತ್ತಿದ್ದಾರೆ. ವಿದ್ಯುತ್ ಇಲ್ಲದೇ ಮೊಬೈಲ್ ಚಾರ್ಜ್ ಮಾಡಲೂ ಸಮಸ್ಯೆಯಾಗಿದ್ದು, ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ತುಂಡಾದ ಕಂಬವನ್ನು ಬದಲಿಸಲು ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.