ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಒಗ್ಗೂಡಿಸುವ ಶ್ರೀಮಂತ ಸಂಸ್ಕೃತಿ

ಜಿಲ್ಲಾ ಜಾನಪದ ಮಹಿಳಾ ಸಮ್ಮೇಳನದಲ್ಲಿ ಮುಗುಳಿ ಲಕ್ಷ್ಮಿದೇವಮ್ಮ
Last Updated 22 ಡಿಸೆಂಬರ್ 2022, 6:49 IST
ಅಕ್ಷರ ಗಾತ್ರ

ಕಡೂರು: ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಮ್ಮೆಲ್ಲರನ್ನೂ ಒಂದುಗೂಡಿಸುವ ಶ್ರೀಮಂತ ಸಂಸ್ಕೃತಿ ಎಂದು ಕಲಾವಿದೆ ಮುಗುಳಿ ಲಕ್ಷ್ಮಿದೇವಮ್ಮ ಹೇಳಿದರು.

ಇಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಏರ್ಪಡಿಸಿದ್ದ ಪ್ರಥಮ ಜಿಲ್ಲಾ ಜಾನಪದ ಮಹಿಳಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಗ್ರಾಮೀಣ ಬದುಕಿನ ನೋವು, ನಲಿವು, ಆಚರಣೆ ಎಲ್ಲವನ್ನೂ ಬಿಂಬಿಸುವ ಜಾನಪದ ಕಲೆಗಳ ಉಳಿವಿಗೆ ಎಲ್ಲರೂ ಮನಸ್ಸು ಮಾಡಬೇಕಿದೆ. ಎಲ್ಲ ಪ್ರಕಾರಗಳಲ್ಲಿಯೂ ಜಾನಪದ ಹಾಸುಹೊಕ್ಕಾಗಿದೆ. ಆಧುನಿಕತೆಯ ನಡುವೆಯೂ ಜಾನಪದಕ್ಕೆ ಮಾನ್ಯತೆ ಸುಪ್ತವಾಗಿದೆ ಎಂದರು.

ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಮಹಿಳಾ ಘಟಕ ಅಸ್ತಿತ್ವಕ್ಕೆ ತಂದ ಹೆಮ್ಮೆ ಚಿಕ್ಕಮಗಳೂರಿನದ್ದರು. ಮಹಿಳಾ ಜಾನಪದ ಸಮ್ಮೇಳನ ನಡೆಸಿದ ಕೀರ್ತಿ ನಮ್ಮ ಜಿಲ್ಲೆಯದ್ದು ಎಂದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಜಾನಪದ ಎಂಬುದು ನಮ್ಮೆಲ್ಲರ ಜೀವನದ ತಳಹದಿ. ಜಾನ
ಪದ ಉಳಿದರೆ ನಮ್ಮ ಸಂಸ್ಕೃತಿ ಉಳಿದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಜಾತ್ಯತೀತ ಸಂಸ್ಕೃತಿಯೆಂದರೆ ಅದು ಜಾನಪದ ಎಂದು ಪ್ರತಿಪಾದಿಸಿದರು.

ಜಾನಪದ ಕಲಾವಿದ ಡಾ.ಮಾಳೇ
ನಹಳ್ಳಿ ಬಸಪ್ಪ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕೆ.ಪಿ.ಸಿ.ಸಿ.ಸದಸ್ಯ ಕೆ.ಎಸ್.ಆನಂದ್ ಜಾನಪದ ವಸ್ತುಪ್ರದರ್ಶನ ಉದ್ಘಾಟಿಸಿದರು. ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸತ್ಯನಾರಾಯಣ, ಎಂ.ಎಸ್.ವಿಶಾಲಾಕ್ಷಮ್ಮ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪರಿಷತ್ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ರೂಪಾ ನಾಯ್ಕ ಇದ್ದರು.

ಧ್ವಜಾರೋಹಣ– ಮೆರವಣಿಗೆ: ರಾಷ್ಟ್ರ, ನಾಡ ಹಾಗೂ ಪರಿಷತ್ತಿನ ಧ್ವಜಾರೋಹಣ ಮಾಡಲಾಯಿತು. ಸಮ್ಮೇಳನಾಧ್ಯಕ್ಷೆ ಮುಗುಳಿ ಲಕ್ಷ್ಮಿದೇವಮ್ಮ ಅವರನ್ನು ಆಲಂಕೃತ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ಸಮ್ಮೇಳನದ ಮಹಾದ್ವಾರಕ್ಕೆ ನೃತ್ಯಶಾರದೆ ಡಾ.ಕೆ.ವೆಂಕಟಲಕ್ಷ್ಮಮ್ಮ, ಮಂಟಪಕ್ಕೆ ಕವಿ ಲಕ್ಷ್ಮೀಶ ಮತ್ತು ವೇದಿಕೆಗೆ ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ಅವರ ಹೆಸರನ್ನು ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT