ಚಿಕ್ಕಮಗಳೂರು: ಅಧಿಸೂಚಿತ ಅರಣ್ಯ ಜಾಗದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮಂಜೂರಾಗಿರುವ ಜಾಗ ಜಿಲ್ಲೆಯಲ್ಲಿ ಎಷ್ಟಿದೆ ಎಂಬುದರ ಸಮಗ್ರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಎಸ್ಐಟಿ ಆರಂಭಿಸಿದೆ.

ಅರಣ್ಯ ಭೂಮಿಯಲ್ಲಿ ಮಂಜೂರಾಗಿರುವ ಪ್ರಕರಣಗಳ ಪಟ್ಟಿ ಸಿದ್ಧಪಡಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸರ್ಕಾರ ರಚನೆ ಮಾಡಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆದಿವೆ.

ಯಾವ ಪ್ರದೇಶ ಅರಣ್ಯ ವ್ಯಾಪ್ತಿಗೆ ಬರಲಿದೆ, ಆ ಪ್ರದೇಶದಲ್ಲಿ ಯಾರಿಗಾದರೂ ಭೂಮಿ ಹಂಚಿಕೆಯಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಿದೆ. ಮಾಹಿತಿಯನ್ನು ಅರಣ್ಯ ಇಲಾಖೆ ಸಂಗ್ರಹ ಮಾಡಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಆದೇಶ ಪತ್ರಗಳನ್ನು ಹುಡುಕಾಡುತ್ತಿದೆ.

ನಿರ್ದಿಷ್ಟ ಪ್ರದೇಶವನ್ನು ಅರಣ್ಯ ಎಂದು ಘೋಷಿಸಲು ಅರಣ್ಯ ಇಲಾಖೆ ಸೆಕ್ಷನ್ 4 ಅಡಿಯಲ್ಲಿ ಅಧಿಸೂಚನೆ ಹೊರಡಿಸುತ್ತದೆ. ಈ ಅಧಿಸೂಚನೆ ಹೊರಬಿದ್ದ ಬಳಿಕವೂ ಕಂದಾಯ ಇಲಾಖೆ ಹಲವರಿಗೆ ಮಂಜೂರು ಮಾಡಿರುವ ಉದಾಹರಣೆಗಳಿವೆ. ಈ ಪ್ರಕರಣಗಳನ್ನು ಇತ್ಯರ್ಥಪಡಿಸಲು ಒಂದೆಡೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿ(ಎಫ್ಎಸ್ಒ) ವಿಚಾರಣೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಅರಣ್ಯ ಎಂದು ಘೋಷಣೆಯಾದ ಬಳಿಕವೂ ಮಂಜೂರಾಗಿರುವ ಉದಾಹರಣೆಗಳಿವೆ. ಎಸ್ಐಟಿ ರಚನೆಯಾದ ಬಳಿಕ ಈ ಕುರಿತ ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಸರ್ಕಾರಿ ಉದ್ದೇಶಕ್ಕೆ, ಸರ್ಕಾರೇತರ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ಮಂಜೂರಾಗಿದ್ದರೆ ಯಾವಾಗ ಮಂಜೂರಾಗಿದೆ, ಯಾವ ಕಾರಣಕ್ಕೆ ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತದೆ. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬಿಡಿಸಲಾಗದ ಕಗ್ಗಂಟು

ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಜಿಲ್ಲೆಯಲ್ಲಿ ಹೆಚ್ಚಿದ್ದು ಇದು ಬಿಡಿಸಲಾಗದ ಕಗ್ಗಂಟಾಗಿದೆ. ಒಂದೇ ಸರ್ವೆ ನಂಬರ್ ಒಂದೇ ಜಾಗ ಆರು ರೀತಿಯ ದಾಖಲೆಗಳು ಸೃಷ್ಟಿಯಾಗಿವೆ. ಈ ಗೊಂದಲ ಬಿಡಿಸುವುದು ಅಧಿಕಾರಿಗಳಿಗೆ ಹರಸಾಹಸವಾಗಿದೆ. ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಪರಿಹಾರಕ್ಕೆ ಜಂಟಿ ಸರ್ವೆ ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ್ದಾರೆ. ಪರಿಶೀಲನೆ ಆರಂಭಿಸಿದಾಗ ಗೊಂದಲಗಳ ಸರಮಾಲೆಯೇ ಅಧಿಕಾರಿಗಳ ಮುಂದೆ ತೆರೆದುಕೊಂಡಿದೆ.

ಒಂದು ಸರ್ವೆ ನಂಬರ್ನಲ್ಲಿ 100 ಎಕರೆ ಜಾಗವಿದ್ದರೆ ಅದಕ್ಕೆ ಐದಾರು ರೀತಿಯ ದಾಖಲೆಗಳು ಸೃಷ್ಟಿಯಾಗಿವೆ. ಜಾಗ ಇರುವುದೇ 100 ಎಕರೆಯಾದರೆ ಅಷ್ಟನ್ನೂ ಒಮ್ಮೆ ಮೀಸಲು ಅರಣ್ಯ ಮತ್ತೊಮ್ಮೆ ಜಿಲ್ಲಾ ಅರಣ್ಯ ಮಗದೊಮ್ಮೆ ಪರಿಭಾವಿತ ಅರಣ್ಯ ಇನ್ನೊಮ್ಮೆ ಜಿಲ್ಲಾಧಿಕಾರಿ ಕಾಯ್ದಿರಿಸಿದ ಅರಣ್ಯ ಮತ್ತೊಂದು ಬಾರಿ ಕಿರು ಅರಣ್ಯ ಇನ್ನೊಂದು ಬಾರಿ ಅರಣ್ಯ ಇಲಾಖೆ ಸ್ವಾಧೀನಕ್ಕೆ ಸೆಕ್ಷನ್ 4 ಪ್ರಕ್ರಿಯೆ ಆರಂಭಿಸಿರುವ ಜಾಗ ಎಂಬುದಾಗಿ ದಾಖಲೆಗಳು ಸೃಷ್ಟಿಯಾಗಿವೆ. ಎಲ್ಲರ ಬಳಿಯೂ ದಾಖಲೆಗಳಿವೆಯಷ್ಟೆ ಜಾಗ ಯಾವುದು ಗಡಿ ಯಾವುದು ಎಂಬುದು ಯಾರಿಗೂ ಗೊತ್ತಿಲ್ಲ. ಈ ರೀತಿ ಒಂದೇ ಜಾಗಕ್ಕೆ ಹಲವು ದಾಖಲೆಗಳು ಸೃಷ್ಟಿಯಾಗಿರುವ 1800ಕ್ಕೂ ಹೆಚ್ಚು ಪ್ರಕರಣಗಳನ್ನು ಜಿಲ್ಲಾಡಳಿತ ಗುರುತಿಸಿತ್ತು. ಈ ಗೊಂದಲ ಬಿಡಿಸುವ ಪ್ರಯತ್ನದ ನಡುವೆ ಅರಣ್ಯ ಪ್ರದೇಶದಲ್ಲಿ ಆಗಿರುವ ಮಂಜೂರಾತಿಯನ್ನು ಅಧಿಕಾರಿಗಳು ಹುಡುಕಬೇಕಿದೆ.

ಮಾಹಿತಿ ಕ್ರೋಢೀಕರಣ

‘ಅರಣ್ಯ ಎಂದು ಘೋಷಣೆಯಾದ ಬಳಿಕ ಆಗಿರುವ ಮಂಜೂರಾತಿ ಕುರಿತ ಮಾಹಿತಿ ಇದೆ. ಅವುಗಳನ್ನು ಕ್ರೋಢೀಕರಿಸುವ ಕಾರ್ಯ ನಡೆಯುತ್ತಿದೆ’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ಬಾಬು ತಿಳಿಸಿದರು. ‘ಯಾವ ಆದೇಶದ ಪ್ರಕಾರ ಮಂಜೂರಾಗಿದೆ. ಆ ಆದೇಶಗಳನ್ನು ಕ್ರೋಢೀಕರಿಸಿ ಅರಣ್ಯ ಘೋಷಣೆಗೂ ಮುನ್ನವೇ ನಂತರವೇ ಎಂಬುದನ್ನು ಗಮನಿಸಲಾಗುವುದು. ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುವುದು. ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ’ ಎಂದರು.