ಭಾನುವಾರ, ಸೆಪ್ಟೆಂಬರ್ 19, 2021
30 °C

ಒಮ್ನಿ ವ್ಯಾನಿಗೆ ಕಾಡಾನೆ ತಿವಿದು ಅಪಘಾತ: ನಾಲ್ವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ‌ ಕುಂದೂರು ಬಳಿ ಸಾಗುತ್ತಿದ್ದ ಒಮ್ನಿ ವ್ಯಾನಿಗೆ ಕಾಡಾನೆ ತಿವಿದು ನಾಲ್ವರು ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಜೋಳದಾಳ್ ಗ್ರಾಮದ ಚಂದ್ರೇಗೌಡ ಮತ್ತು ಕುಟುಂಬದವರು ವ್ಯಾನ್ ನಲ್ಲಿ ಹೊರನಾಡಿಗೆ ಸಾಗುವಾಗ ಅವಘಡ ಸಂಭವಿಸಿದೆ.

ಚಂದ್ರೇಗೌಡ ಅವರಿಗೆ ತೀವ್ರ ಪೆಟ್ಟಾಗಿದ್ದು , ಮಂಗಳೂರಿಗೆ ಒಯ್ಯಲಾಗಿದೆ. ಇತರ ನಾಲ್ವರಿಗೆ ಮೂಡಿಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

'ವ್ಯಾನ್ ಕುಂದೂರು ಬಳಿ ಸಾಗುವಾಗ ಆನೆ ಕಾಣಿಸಿದೆ. ಆನೆ ನೋಡಿ ವ್ಯಾನ್ ನಿಲ್ಲಿಸಿದ್ದಾರೆ. ಆನೆ ಹಿಂದಿನಿಂದ ಬಂದು ತಿವಿದಿದೆ, ವ್ಯಾನು ಉರುಳಿದೆ. ವ್ಯಾನ್ ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯಕ್ 'ಪ್ರಜಾವಾಣಿ'ಗೆ ತಿಳಿಸಿದರು. ಸ್ಥಳೀಯರು ಕೆಲಕಾಲ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು